ಮಳೆಯಾಗಲೆಂದು ದೇವಿಗೆ 16 ಕುರಿ ಬಲಿ ಕೊಟ್ಟ ಶಾಸಕ!
ಬಂಗಾರಪೇಟೆ: ತಾಲೂಕಲ್ಲಿ ಸಮೃದ್ಧವಾಗಿ ಮಳೆಯಾಗಲೆಂದು ಹಾರೈಸಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಆಂಧ್ರಪ್ರದೇಶದ ಬಾಯಿಕೊಂಡ ಗಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, 16 ಕುರಿಗಳನ್ನು ಬಲಿಕೊಟ್ಟಿದ್ದಾರೆ.
8 ವರ್ಷಗಳಿಂದ ತಾಲೂಕು ಭೀಕರ ಬರಾಗಲಕ್ಕೆ ಸಿಲುಕಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಜಟಿಲಗೊಳ್ಳುತ್ತಿರುವುದರಿಂದ ನಾನಾ ಸಂಕಷ್ಟಗಳು ತಲೆ ಎತ್ತಿವೆ. ಗ್ರಾಮಗಳಲ್ಲಿ ಕಾಲಿಟ್ಟರೆ ಜನಪ್ರತಿನಿಧಿಗಳನ್ನು ಗ್ರಾಮಸ್ಥರು ಪ್ರಶ್ನಿಸುವಂತಾಗಿದೆ. ಈ ಸಮಸ್ಯೆಯಿಂದ ಪಾರು ಮಾಡುವಂತೆ ಶಾಸಕ ನಾರಾಯಣಸ್ವಾಮಿ ಆಂಧ್ರ ಪ್ರದೇಶದ ಪುಂಗನೂರು ಬಳಿಯಿರುವ ಬಾಯಿಕೊಂಡ ಗಂಗಮ್ಮ ದೇವಿರಲ್ಲಿ ಹರಕೆ ಹೊತ್ತು 16 ಕುರಿಗಳನ್ನು ಬಲಿ ಕೊಟ್ಟಿದ್ದಾರೆ. ಈ ವಿಶೇಷ ಪೂಜೆ ಕಾರ್ಯದಲ್ಲಿ ಕ್ಷೇತ್ರದಿಂದ ಪುರಸಭೆ ಸದಸ್ಯರು, ಗ್ರಾಪಂ ಸದಸ್ಯರು ಸೇರಿದಂತೆ ಸುಮಾರು ಒಂದು ಸಾವಿರ ಜನ ಭಾಗವಹಿಸಿದ್ದರು. ಪೂಜೆ ಬಳಿಕ ಶಾಸಕರೇ ಎಲ್ಲಾ ಜನರಿಗೆ ಬಾಡೂಟ ಬಡಿಸಿ, ಎಲ್ಲರ ಗಮನ ಸೆಳೆದರು.
ಪುರಸಭೆ ಅಧ್ಯಕ್ಷ ಗಂಗಮ್ಮರಂಗರಾಮಯ್ಯ, ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮುಖಂಡರಾದ ಭೀಮಣ್ಣ, ಅಪ್ಪಯ್ಯಗೌಡ, ಪುರಸಭೆ ಸದಸ್ಯರಾದ ವೆಂಕಟೇಗೌಡ, ಆರೋಕ್ಯ ರಾಜಣ್ಣ, ಶಫಿ, ರಮೇಶ್, ಭಾಗ್ಯಮ್ಮ, ದೇಶಿಹಳ್ಳಿ ವೆಂಕಟರಾಮ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

