ಕೋಲಾರ

ಜೂನ್‌ನಿಂದ ಹೊಸ ಪಡಿತರ ಚೀಟಿ ವಿತರಣೆ

Published On :

ಮಾಲೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆಯಿಂದಾಗಿ ತಾತ್ಕಲಿಕವಾಗಿ ನಿಲ್ಲಿಸಲಾಗಿದ್ದ ಹೂಸ ಪಡಿತರ ಚೀಟಿ ವಿತರಣೆಗಾಗಿ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ರಮ ಜೂನ್ ನಿಂದ ಪ್ರಾರಂಭಿಸಲಾಗುತ್ತಿದೆ ಎಂದು ತಹಸೀಲ್ದಾರ್ ಶಿವು ಕುಮಾರ್ ಹೇಳಿದರು.
ತಮ್ಮ ಕಚೇರಿಯಲ್ಲಿ ಪತ್ರಕರ್ತರೊಡನೆ ಮಾತನಾಡಿ, ಅರ್ಹರಿಗೆ ಕಾರ್ಡ್ ಸಿಗಬೇಕೆಂಬ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೂಸ ಪಡಿತರ ನೀತಿ ಜಾರಿಗೆ ತಂದಿದೆ. ಮೊದಲ ಬಾರಿಗೆ ಎಫ್‌ಐಎಫ್‌ಒ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಹೂಸ ನೀತಿ ಅನ್ವಯ ಹೂಸದಾಗಿ ಹಾಗೂ ಈಗಾಗಲೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರು ಆಹಾರ ಇಲಾಖೆಯ ಮೊಬೈಲ್ ಸಂಖ್ಯೆ 9212357123ಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸುವವರು ಪಡಿತರ ಚೀಟಿಗಾಗಿ ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ. ಪರಿಶೀಲನೆ ನಂತರ ಅರ್ಹ ಪಡಿತರ ಚೀಟಿಗಳನ್ನು ಪಂಚಾಯ್ತಿಗೆ ಕಳುಹಿಸಲಾಗುವುದು. 2010ಕ್ಕಿಂತ ಮುಂಚೆ ಪಡಿತರ ಚೀಟಿ ಪಡೆದಿದ್ದವರು ಫ್ರಾಂಚೈಸಿಗಳಲ್ಲಿ ಹೂಸದಾಗಿ ಎಲ್ಲಾ ಸದಸ್ಯರೂಂದಿಗೆ ಭಾವಚಿತ್ರ-ಜೀವಮಾಪಕ ನೀಡಬೇಕು ಎಂದು ತಿಳಿಸಿದರು. ಹೂಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಗುರುತುದಾರರ ಅಗತ್ಯವಿರುವುದಿಲ್ಲ. 2010 ಕ್ಕಿಂತ ಮುಂಚೆ ಪಡಿತರ ಚೀಟಿ ಪಡೆದವರು ಹಾಗೂ 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಎಪಿಕ್ ಅಥವಾ ಆಧಾರ್ ಕಾರ್ಡ್‌ನೂಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಆಹಾರ ಶಿರಸ್ತೇದಾರ್ ರಾಮಚಂದ್ರಪ್ಪ, ಆಹಾರ ನಿರೀಕ್ಷಕ ವಿಜಯಾಂಭಿಕೆ, ಕಂದಾಯಾಧಿಕಾರಿ ಕೆ.ಸಿ.ನಾರಾಯಣಸ್ವಾಮಿ ಇದ್ದರು.

'ಉತ್ತಮ ಮುಂಗಾರು ಮಳೆಯಾಗಲಿ'
ತಿಪಟೂರು: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕೆರೆಗೋಡಿ-ರಂಗಾಪುರ ಕ್ಷೇತ್ರದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ 15ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಆಶೀರ್ವಾದ ಪಡೆದರು.
ಶ್ರೀ ಕ್ಷೇತ್ರದಲ್ಲಿ ಪ್ರತಿ ಅಮಾವಾಸ್ಯೆಯಲ್ಲೂ ನಾಡಿನಲ್ಲಿ ಶಾಂತಿ, ಸಮೃದ್ಧಿ ಮತ್ತು ಭಕ್ತರ ಇಷ್ಟಾರ್ಥಗಳು ಈಡೇರಲೆಂದು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ.
ನಿನ್ನೆ ಬಾದಾಮಿ ಅಮಾವಾಸೆ ಪ್ರಯುಕ್ತ ಸಂಜೆ 6ಗಂಟೆಯಿಂದ ರಾತ್ರಿ 10ಗಂಟೆ ವೇಳೆಗೆ ಸುಮಾರು 15ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಈ ಸಂದರ್ಭದಲ್ಲಿ ಆಶೀರ್ವಾದ ನೀಡಿ ನಾಡಿಗೆ ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿ. ಆತಂಕದ ಜೀವನ ನಡೆಸುತ್ತಿರುವ ತೆಂಗು ಬೆಳೆಗಾರರು ಉತ್ತಮ ಮಳೆ-ಫಸಲಿನಿಂದ ನೆಮ್ಮದಿ ಜೀವನ ಸಾಗಿಸುವಂತಾಗಲಿ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.