ಕೊಪ್ಪಳ

ಬಿಜೆಪಿಗೆ ಜನರಿಂದ ತಕ್ಕ ಪಾಠ: ಗುಳಗಣ್ಣವರ

Published On :

ಯಲಬುರ್ಗಾ: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅವಿರತವಾಗಿ ಶ್ರಮಿಸಿದ ಮಾಜಿ ಸಚಿವರಾದ ಜನಾರ್ದನ ರೆಡ್ಡಿಯನ್ನು ಜೈಲಿಗೆ ಕಳಿಸಿ, ಲೋಕಾಯುಕ್ತರ ವರದಿಯಲ್ಲಿ ಬಿ. ಶ್ರೀರಾಮುಲು ಹೆಸರು ಸೇರಿಸಿ ಬಿಜೆಪಿಯು ಮಸಿ ಬಳಿಯುವ ಕೆಲಸ ಮಾಡಿದೆ ಎಂದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ನವೀನಕುಮಾರ ಗುಳಗಣ್ಣವರ ಆರೋಪಿಸಿದರು.
ತಾಲೂಕಿನ ಬಸಾಪುರ, ತುಮ್ಮರಗುದ್ದಿ, ಚಿಕ್ಕೋಪ್ಪ, ಬಳೋಟಗಿ ಗ್ರಾಮದಲ್ಲಿ ಗುರುವಾರ ತಾಲೂಕು ಬಿಎಸ್ಸಾರ್ ಕಾಂಗ್ರೆಸ್ ಏರ್ಪಡಿಸಿದ್ದ ಸ್ವಾಭಿಮಾನಿ ಶ್ರೀರಾಮುಲು ಸಂದೇಶ ಯಾತ್ರೆಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ಅಧಿಕಾರಕ್ಕೆ ತರಲು ನಿಷ್ಠೆ, ಪ್ರಾಮಾಣಿಕವಾಗಿ ದುಡಿದವರಿಗೆ ದ್ರೋಹ ಬಗೆದ ಬಿಜೆಪಿಗೆ ಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.
108 ಅಂಬ್ಯುಲೆನ್ಸ್ ಸೇವೆಯನ್ನು ರಾಜ್ಯಾದ್ಯಂತ ಒದಗಿಸಿದ ಕೀರ್ತಿ ಶ್ರೀರಾಮುಲುಗೆ ಸಲ್ಲುತ್ತದೆ. ರಾಜ್ಯದ ಜನತೆ ಬಿಎಸ್ಸಾರ್ ಕಾಂಗ್ರೆಸ್ ಬೆಂಬಲಿಸಿ ಅಧಿಕಾರಕ್ಕೆ ತರಬೇಕೆಂದು ಹೇಳಿದರು.
ಪಕ್ಷದ ಎಸ್ಸಿ, ಎಸ್ಟಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಾ ನಾಯಕ, ಶೇಖರಗೌಡ ಚಿಕ್ಕೊಪ್ಪ, ನಾಗನಗೌಡ ಹಿರೇಗೌಡ್ರ, ಸಂಜೀವ ನಾಯಕ, ರಾಜಶೇಖರ ಹೊಂಬಳ, ಹೊಳೆಗೌಡ ಪಾಟೀಲ, ಷಣ್ಮುಖಪ್ಪ ರಾಂಪುರ, ,ಅಶ್ರಫ್‌ಅಲಿ ಗಡಾದ, ವಿಕ್ರಂ ಚಲವಾದಿ, ಬಸವರಾಜ ಬಿಜಕಲ್, ಮಲ್ಲಿಕಾರ್ಜುನ ಕುರಟ್ಟಿ, ಸಂತೋಷ ಕಳ್ಳಿಮಠ, ವೀರೇಶ ಹಟ್ಟಿ, ದೊಡ್ಡನಗೌಡ ತೋಟಗಂಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.