ಕೊಪ್ಪಳ ನಗರಸಭೆ ಚುನಾವಣೆ ಹೈಲೈಟ್ಸ್
ಯಾವ ಪಕ್ಷಕ್ಕೆ ಎಷ್ಟು ಮತ?
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ಗಳಿಗೆ ನಡೆದಿರುವ ಚುನಾವಣೆಗಿಂತ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಮುಂದಿಟ್ಟುಕೊಂಡು ಯಾವ ಪಕ್ಷ ಎಷ್ಟು ಮತ ಪಡೆದಿದೆ ಎನ್ನುವ ಕುತೂಹಲವನ್ನುಂಟು ಮಾಡಿದೆ. ಕೊಪ್ಪಳ ನಗರದಲ್ಲಿ 34111 ಮತದಾರರು ಮತ ಚಲಾಯಿಸಿದ್ದರೆ, ಕಾಂಗ್ರೆಸ್ 12484 (ಶೇ. 36) ಬಿಜೆಪಿ 9422 (ಶೇ. 27.62), ಜೆಡಿಎಸ್ 6108 (ಶೇ. 17.90) ಬಿಎಸ್ಸಾಆರ್ 2925 (25 ವಾರ್ಡ್ಗೆ ಸ್ಪರ್ಧಿಸಿದೆ. ಶೇ 8.5), ಕೆಜೆಪಿ 423 (6 ವಾರ್ಡ್ಗಳಿಗೆ, ಶೇ 1.2) ಮತ ಪಡೆದಿದೆ.
ಮತಗಳ ಅಂತರ: ಕೊಪ್ಪಳ ನಗರದ ನಾಲ್ಕನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಭಜಂತ್ರಿ 855 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಬಿಎಸ್ಆರ್ನ ರಂಗಪ್ಪ ಪೂಜಾರ್ ಅವರಿಗಿಂತ 554 ಮತಗಳ ಅಂತರದಿಂದ ಜಯ ಸಾಧಿಸಿ ಅತ್ಯಧಿಕ ಅಂತರದ ಜಯ ಸಾಧಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 7ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ನಜೀಮಾ ಬೇಗಂ 816 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ನ ಬೇಗಂ ಅಪ್ಸರಾ ಮಿಯಾ ಅವರ ವಿರುದ್ಧ 431 ಮತಗಳ ಅಂತರದಿಂದ ಜಯ ಸಾಧಿಸಿ ಎರಡೇ ಸ್ಥಾನದಲ್ಲಿದ್ದಾರೆ. 14ನೇ ವಾರ್ಡ್ನಲ್ಲಿ ಕಾಂಗ್ರೆಸ್ನ ಮಲ್ಲಪ್ಪ ವೀರಪ್ಪ ಕವಲೂರು 645 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ನ ಗೆಜ್ಜಿ ಸೋಮಪ್ಪ ಅವರ ವಿರುದ್ಧ 399 ಮತಗಳ ಅಂತರದಿಂದ ಜಯ ಸಾಧಿಸಿ, ಮೂರನೇ ಸ್ಥಾನದಲ್ಲಿದ್ದಾರೆ.
ಕಡಿಮೆ ಮತ: 20ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ರಾಜಾಭಕ್ಷಿ ಕೇವಲ 5 ಮತಗಳನ್ನು ಅಧಿಕ ಪಡೆದು ಅತಿ ಕಡಿಮೆ ಮತ ಪಡೆದ ಅಭ್ಯರ್ಥಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನು 21ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ರೋಹಿಣಿ 6 ಮತ, 26ನೇ ವಾಡ್ನ ದತ್ತಾತ್ರೇಯ ಜೋಷಿ 7 ಮತ ಪಡೆದಿದ್ದಾರೆ.
ಐದನೇ ಬಾರಿ ಸೋಲು: 14ನೇ ವಾರ್ಡ್ನ ಸೋಮಪ್ಪ ಗೆಜ್ಜಿ ಸತತ ಐದನೇ ಬಾರಿಗೆ ಸೋಲುಂಡಿದ್ದಾರೆ. ಸ್ಪರ್ಧಿಸಿದ ಅಭ್ಯರ್ಥಿಗಳಲ್ಲೇ ಹಿರಿಯರಾದ ಇವರು ಈ ಸಾರಿಯೂ ಸೋತು ಕೊಪ್ಪಳದಲ್ಲಿ ಅತ್ಯಧಿಕ ಬಾರಿ ಸೋಲುಂಡಿರುವ ಹಿರಿಯ ವ್ಯಕ್ತಿ ಎಂದೇ ಕರೆಯುವಂತಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

