ವಿಜ್ಞಾನ ಯೋಗ್ಯತಾ ಪರೀಕ್ಷೆ
ರೋಟರಿ ಜಿಐಎಂಡಿಎಸ್ ಮತ್ತು ಪೀಯರ್‌ಸನ್ ಸಂಯುಕ್ತವಾಗಿ ಹೂಟಗಳ್ಳಿಯ ಜಿಐಎಂಡಿಎಸ್ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಫೆ.3ಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಯೋಗ್ಯತಾ ಪರೀಕ್ಷೆ ಏರ್ಪಡಿಸಿದೆ. ಆಸಕ್ತರು ಮೊ. 9844144232 ಸಂಪರ್ಕಿಸಬಹುದು.
ಎನ್‌ಇಇಟಿ
ಅಣಕ ಪರೀಕ್ಷೆ
ಶಿಕ್ಷಾ ಭಾರತಿ ಪಿಯು ಕಾಲೇಜು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ಎನ್‌ಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಅಣಕ ಪರೀಕ್ಷೆಯನ್ನು ಫೆ.3ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸರಸ್ವತಿಪುರಂನ ವಿಜಯ ವಿಠ್ಠಲ ಪಿಯು ಕಾಲೇಜಿನಲ್ಲಿ ನಡೆಸಲಿದೆ. ಆಸಕ್ತರು ಮೊ. 9740084009 ಸಂಪರ್ಕಿಸಬಹುದು.
ನಿವೃತ್ತರಿಗೆ ಆರೋಗ್ಯ ಶಿಬಿರ
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ಫೆ.3ರ ಬೆಳಗ್ಗೆ 10ಕ್ಕೆ ಸಂಘದ ಕಚೇರಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದೆ. ನಿವೃತ್ತ ನೌಕರರು ಈ ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 9141119651 ಸಂಪರ್ಕಿಸಬಹುದು.
ಆಯುರ್ವೇದ
ತಪಾಸಣೆ
ರಿವರ್ ವ್ಯೂ ಆಸ್ಪತ್ರೆಯ ಧನ್ವಂತರಿ ವಿಭಾಗವು ಫೆ.3ರ ಬೆಳಗ್ಗೆ 10ಕ್ಕೆ ಸಾರ್ವಜನಿಕರಿಗೆ ನರರೋಗ ಸಂಬಂಧಿಸಿದ ಸಮಸ್ಯೆಗಳಿಗೆ ಆಯುರ್ವೇದ ತಪಾಸಣೆ - ಸಲಹಾ ಶಿಬಿರ ಏರ್ಪಡಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 9620220024 ಸಂಪರ್ಕಿಸಬಹುದು.
ಬ್ರಾಹ್ಮಣರ ಒಕ್ಕೂಟ ಉದ್ಘಾಟನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬ್ರಾಹ್ಮಣರ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಫೆ.3ರ ಬೆಳಗ್ಗೆ 10ಕ್ಕೆ ನಾರಾಯಣಶಾಸ್ತ್ರಿ ರಸ್ತೆಯ ಹೊಯ್ಸಳ ಕರ್ನಾಟಕ ಸಂಘದಲ್ಲಿ ನಡೆಯಲಿದೆ. ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನದ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ಪರಹಿತಾನಂದಜೀ ಮಹಾರಾಜ್ ಸಾನ್ನಿಧ್ಯವಹಿಸಲಿದ್ದು, ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸುವರು.
ಜೀವನ ಕಲೆ ಶಿಬಿರ
ದಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯು ಕುವೆಂಪುನಗರ, ಸಂಪಿಗೆ ರಸ್ತೆಯ ಮನೆ ನಂ.2343ರಲ್ಲಿ ಜೀವನ ಕಲೆ ಶಿಬಿರದ ಪರಿಚಯ ಭಾಷಣವನ್ನು ಫೆ.3ರ ಸಂಜೆ 6.30ಕ್ಕೆ ಏರ್ಪಡಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 9845963387 ಸಂಪರ್ಕಿಸಬಹುದು.
ಯೋಗಾಸನ ತರಗತಿ
ಪತಂಜಲಿ ಯೋಗ ಪ್ರತಿಷ್ಠಾನವು ಫೆ.3ರ ಬೆಳಗ್ಗೆ 6 ರಿಂದ 7ರವರೆಗೆ ನಾರಾಯಣಶಾಸ್ತ್ರಿ ರಸ್ತೆಯ ಹೊಯ್ಸಳ ಕರ್ನಾಟಕ ಸಂಘದಲ್ಲಿ ಯೋಗಾಸನ ಮತ್ತು ಪ್ರಾಣಾಯಾಮ ತರಗತಿ ಏರ್ಪಡಿಸಿದೆ. 45 ದಿನಗಳ ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ. 9632127272 ಸಂಪರ್ಕಿಸಬಹುದು.
ಸಂಗೀತ ಕಾರ್ಯಕ್ರಮ
ಶ್ರೀ ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ಫೆ.3 ರಿಂದ 9ರವರೆಗೆ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಅಂಗವಾಗಿ ನಗರದ ವಿವಿಧ ಬಡಾವಣೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ. ಫೆ. 3ರಂದು ವಿಜಯನಗರದ ವಿನಾಯಕ ದೇವಸ್ಥಾನ, ಫೆ. 4ರಂದು ಗೋಕುಲಂನ ಆಳ್ವಾರ್ ಭವನ, ಫೆ. 5ರಂದು ಬಿಡಾರಂ ಕೃಷ್ಣಪ್ಪನವರ ಸೀತಾರಾಮಮಂದಿರ, ಫೆ.6ರಂದು ವಿದ್ಯಾರಣ್ಯಪುರಂನ ಆವನಿ ಶಂಕರಮಠ, ಫೆ. 7ರಂದು ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರ, ಫೆ.8ರಂದು ಜಯನಗರ ರಾಮಮಂದಿರ ಮತ್ತು ಫೆ. 9ರಂದು ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಪ್ರಾರ್ಥನ ಮಂದಿರದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

