'ವಿವೇಕಾನಂದರ ಆದರ್ಶ ಯುವಕರಿಗೆ ದಾರಿದೀಪ'
ಕೆ.ಆರ್.ಪೇಟೆ: ಹಿಂದೂ ಧರ್ಮವನ್ನು ಸಂರಕ್ಷಿಸುವ ಮತ್ತು ಸದೃಢ ಭಾರತವನ್ನು ನಿರ್ಮಾಣದ ಗುರಿ ಹೊಂದಿದ್ದ ಸ್ವಾಮಿವಿವೇಕಾನಂದರ ಬದುಕು, ಆದರ್ಶಗಳು ಇಂದಿನ ಯುವಶಕ್ತಿಗೆ ದಾರಿದೀಪವಾಗಿದೆ ಎಂದು ಮೈಸೂರಿನ ಆರ್ಎಸ್ಎಸ್ ಸರಸಂಚಾಲಕ ನಿತ್ಯಾನಂದ ವಿವೇಕವಂಶಿ ಅಭಿಪ್ರಾಯಪಟ್ಟರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭವ್ಯಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಪಸರಿಸಿದ ವಿವೇಕಾನಂದರನ್ನು ನಿತ್ಯ ನೆನೆಯಬೇಕು ಎಂದರು.
ಮನುಷ್ಯ ಇತರರಿಗಾಗಿ ಬದುಕಬೇಕು. ಪರರ ಸೇವೆಯಲ್ಲಿ ಪರಮಾತ್ಮನನ್ನು ಕಾಣಬೇಕು. ಸ್ವಂತ ಲಾಭಕ್ಕಾಗಿ ಜೀವಿಸುವುದರ ಬದಲಾಗಿ ಇತರರ ಜೀವನದ ಉದ್ಧಾರಕ್ಕಾಗಿ ಜೀವಿಸಬೇಕು ಎಂಬ ದಿವ್ಯ ಸಂದೇಶವನ್ನು ಸಾರಿದ ಮಹಾನ್ ಕ್ರಾಂತಿಪುರುಷ ವಿವೇಕಾನಂದರು ನುಡಿದಂತೆ ನಡೆದವರು ಎಂದರು.
ವಿದೇಶಿಯರಿಗೆ ಭಾರತೀಯರ ಸಹೋದರ ಮತ್ತು ಸಹೋದರಿ ಎಂಬ ಪದದ ಅರ್ಥವನ್ನು ತಿಳಿಸಿಕೊಡುವ ಮೂಲಕ ನಮ್ಮ ಹಿಂದೂ ಸಂಸ್ಕೃತಿಯ ಪಾಠವನ್ನು ಬೋಧಿಸಿದರು. ಇವರ ಜೀವನ ಚರಿತ್ರೆಯು ಯುವಕರ ಕಲಿಯುವಿಕೆಯಲ್ಲಿ ಶಿಕ್ಷಣದ ಪ್ರಮುಖ ಭಾಗವಾಗಬೇಕು. ಆಗ ಮಾತ್ರ ದೇಶದಲ್ಲಿ ಏನಾದರೂ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ಬಾಬಾರಾಮ್ದೇವ್ ಪ್ರತಿಷ್ಠಾನದ ಬಸವರಾಜು ಮಾತನಾಡಿ, ಸ್ವದೇಶಿ ಉತ್ಪನ್ನಗಳ ಮಹತ್ವವನ್ನು ಸಭೆಯಲ್ಲಿ ವಿವರಿಸಿದರು. ಜಿಲ್ಲಾ ವರ್ತೂರು ಪ್ರಕಾಶ್ ಯುವ ಸೇನೆಯ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅನುಸೂಯಮ್ಮ ಅಧ್ಯಕ್ಷತೆ ವಹಿಸಿದ್ದರು. ಅಧೀಕ್ಷಕ ಬಿ.ಎ.ಮಂಜುನಾಥ್, ಉಪನ್ಯಾಸಕರಾದ ಪ್ರಕಾಶ್, ಆಶಾ, ನಂಜುಂಡಯ್ಯ, ಬಸವಲಿಂಗಪ್ಪ, ಶಿವಶಂಕರ್, ಹರೀಶ್, ವಸಂತಕುಮಾರ್, ರಾಧಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

