ಶರಣರ ವಚನ ಪಾಲಿಸಿದರೆ ಉತ್ತಮ ಸಮಾಜ
ಮಂಡ್ಯ: ಮನುಷ್ಯ ವಚನಗಳಲ್ಲಿ ಇರುವಂತೆ ದೇವರು ಕೊಟ್ಟಿರುವ ಬುದ್ಧಿ ಪಾಲಿಸಿದರೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ನೆಮ್ಮದಿಯಿಂದ ಇರುತ್ತದೆ ಎಂದು ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ. ಲೀಲಾ ಅಪ್ಪಾಜಿ ಹೇಳಿದರು.
ನಗರದ ಅಪರ ಜಿಲ್ಲಾಧಿಕಾರಿ ಶಂಕರಪ್ಪ ಅವರ ಮನೆಯಂಗಳದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ನಡೆದ ಮನೆ ಮನೆಯಲ್ಲಿ ವಚನಧಾರೆ- 38 ಕಾರ್ಯಕ್ರಮದಲ್ಲಿ ಮಾತನಾಡಿ, ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ ಎಂಬ ವಚನದಂತೆ ಇಂದಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿಷಾದಿಸಿದರು. ವಕೀಲ ಬಸವಯ್ಯ ಮತ್ತು ಉಪನ್ಯಾಸಕಿ ಗೀತಾಮಣಿ ವಚನಗಳ ಸಾಹಿತ್ಯ ಇಂದಿನ ಜನಾಂಗದಲ್ಲಿ ಶೂನ್ಯ ಸಂಪಾದನೆಯೊಂದಿಗೆ ಯಾವ ರೀತಿ ಅಡಕವಾಗಿದೆ ಎಂಬ ಅಂಶದಲ್ಲಿ ನೆರೆದಿದ್ದ ಸಭಿಕರೊಡನೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ವಚನ ಗಾಯನವನ್ನು ಭಾರ್ಗವಿ, ಕೃತಿಕಾ, ರಚನಾ ಸೇರಿದಂತೆ ಪ್ರತಿಭಾಂಜಲಿ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಉಪ ಕಾರಾಗೃಹದ ಅಧೀಕ್ಷಕ ಸುಂದರ್, ಡಾ.ಕುಸುಮ,ನ್ಯಾಯಾಧೀಶೆ ಆರ್. ಶಾರದ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿಜಯ್, ಎಸ್. ಸಿದ್ದರಾಮಪ್ಪ, ಎಂ.ವಿ. ಧರಣೇಂದ್ರಯ್ಯ, ಡಾ.ಎಚ್.ಪಿ. ಮಂಜುಳಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

