ಮಂಡ್ಯ ನಗರಸಭೆ: 40 ನಾಮಪತ್ರ ವಾಪಸ್
ಮಂಡ್ಯ: ನಗರಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದ 214 ಮಂದಿ ಅಭ್ಯರ್ಥಿಗಳ ಪೈಕಿ 40 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಈಗ ಅಂತಿಮವಾಗಿ 175 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ನಗರಸಭೆಯ 35 ವಾರ್ಡ್ಗಳ ಪೈಕಿ ಕಾಂಗ್ರೆಸ್ 34, ಬಿಜೆಪಿ- 25, ಜೆಡಿಎಸ್ - 35, ಬಿಎಸ್ಆರ್ ಕಾಂಗ್ರೆಸ್- 16, ಕೆಜೆಪಿ- 11, ಎಸ್ಡಿಪಿಐ- 6 ಹಾಗೂ 48 ಪಕ್ಷೇತರರು ಸೇರಿ 175 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ನಾಮಪತ್ರ ಹಿಂಪಡೆದವರು: 1ನೇ ವಾರ್ಡಿನಲ್ಲಿ ರಹಮತ್ ಉನ್ನಿಸಾ, 3ನೇ ವಾರ್ಡಿನಲ್ಲಿ ಎಸ್.ಮಂಜು, ಸಯ್ಯದ್ ನಯೀಂ, 4ನೇ ವಾರ್ಡಿನಲ್ಲಿ ಸಾದತ್ ಆಲಿ, 7ನೇ ವಾರ್ಡಿನಲ್ಲಿ ಎಲ್. ಪುಟ್ಟಸ್ವಾಮಿ, ಪೂರ್ಣಿಮಾ, ಟಿ.ಎಸ್.ಸತೀಶ್, 8ನೇ ವಾರ್ಡಿನಲ್ಲಿ ಆರ್.ಶಿವಪ್ಪ, 10ನೇ ವಾರ್ಡಿನಲ್ಲಿ ಜಯಕುಮಾರ್, 11ನೇ ವಾರ್ಡಿನಲ್ಲಿ ಎಸ್.ಎಂ.ಉಮೇಶ್ ನಾಮಪತ್ರ ವಾಪಸ್ ಪಡೆದಿದ್ದಾರೆ. 14ನೇ ವಾರ್ಡಿನಲ್ಲಿ ಕೃಷ್ಣ, ಎಂ.ಚನ್ನಮ್ಮ, ಟಿ.ನಾರಾಯಣಸ್ವಾಮಿ, ಎಚ್.ಆರ್.ರಾಘವೇಂದ್ರ, 15ನೇ ವಾರ್ಡಿನಲ್ಲಿ ಪಿ.ಕೃಷ್ಣಕುಮಾರ್, ಡಿ.ಪ್ರಸನ್ನಕುಮಾರ್, 17ನೇ ವಾರ್ಡಿನಲ್ಲಿ ಎಸ್.ಸಂತೋಷ್ ಎಚ್.ಬಿ. ಸತೀಶ್, 18ನೇ ವಾರ್ಡಿನಲ್ಲಿ ಎಂ.ಜೆ.ಶಿವಣ್ಣ, ದೊರೆರಾಜ್, ಗೋವರ್ಧನ ಉಮೇದುವಾರಿಕೆ ಹಿಂಪಡೆದು ಕಣದಿಂದ ಹಿಂದಕ್ಕೆ ಸರಿದಿದ್ದಾರೆ.
19ನೇ ವಾರ್ಡಿನಲ್ಲಿ ಎಂ.ಎನ್. ಕೃಷ್ಣ, ಎಂ.ಎಸ್. ಮನೋಜ್, 23ನೇ ವಾರ್ಡಿನಲ್ಲಿ ಜಮೀಲ್ ಅಹಮದ್, 24ನೇ ವಾರ್ಡಿನಲ್ಲಿ ವಿಜಯ, 25ನೇ ವಾರ್ಡಿನಲ್ಲಿ ಕೆ.ಗೌರಮ್ಮ, ವೆಂಕಟಮ್ಮ, 27ನೇ ವಾರ್ಡಿನಲ್ಲಿ ಅನಿಲ್ ಕುಮಾರ್, ಬಿ.ಕೆ.ಸಂದೀಪ್, 28ನೇ ವಾರ್ಡಿನಲ್ಲಿ ಸಿದ್ದಯ್ಯ, 29ನೇ ವಾರ್ಡಿನಲ್ಲಿ ಕುಮಾರಸ್ವಾಮಿ, ಪಿ.ಎನ್.ಶ್ರೀನಿವಾಸ್.
30ನೇ ವಾರ್ಡಿನಲ್ಲಿ ಜಿ.ಪಿ.ಗಿರೀಶ್, ಕೆ.ಎಸ್.ಚಂದ್ರಶೇಖರ್, 31ನೇ ವಾರ್ಡಿನಲ್ಲಿ ಯಶೋಧಮ್ಮ, 32ನೇ ವಾರ್ಡಿನಲ್ಲಿ ಗುಲ್ನಾಜ್, 35ನೇ ವಾರ್ಡಿನಲ್ಲಿ ಎಸ್.ರವಿ, ಡಿ.ಮಂಜುನಾಥ, ಡಿ.ರಾಮಚಂದ್ರ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

