ಮಂಡ್ಯ

ಶ್ರೀರಂಗಪಟ್ಟಣ: 98 ಮಂದಿ ಕಣದಲ್ಲಿ (ಸುದ್ದಿ ಸಂಕ್ಷೇಪ)

Published On :

ಶ್ರೀರಂಗಪಟ್ಟಣ:  ಪುರಸಭೆ 23 ವಾರ್ಡ್‌ಗಳಲ್ಲಿ ಅಂತಿಮವಾಗಿ 98 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸಲ್ಲಿಕೆಯಾಗಿದ್ದ ಒಟ್ಟು 135 ನಾಮಪತ್ರಗಳ ಪೈಕಿ 23 ನಾಮಪತ್ರ ತಿರಸ್ಕೃತಗೊಂಡು, 10 ನಾಮಪತ್ರ ವಾಪಸ್ ಪಡೆಯಲಾಗಿದೆ.
ಚುನಾವಣಾಧಿಕಾರಿ ತಹಸೀಲ್ದಾರ್ ಅರುಳ್‌ಕುಮಾರ್ ಗುರುವಾರ ಮಿನಿವಿಧಾನ ಸೌಧದಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಸಭೆ ಕರೆದು ಚುನಾವಣಾ ನೀತಿ ಸಂಹಿತೆ, ಪ್ರಚಾರ, ಖರ್ಚು-ವೆಚ್ಚ ಪಟ್ಟಿ ನೀಡುವುದು, ಫ್ಲೆಕ್ಸ್ ಹಾಕುವುದು, ಸ್ಥಳೀಯ ಪುರಸಭೆ ಮತ್ತು ಪೊಲೀಸರ ಅನುಮತಿ ಪಡೆಯುವುದು ಸೇರಿದಂತೆ ಅಗತ್ಯ ವಿಷಯಗಳ ಬಗ್ಗೆ ತಿಳಿಸಿದರು.ಕಣದಲ್ಲಿ ಉಳಿದಿರುವವರ ವಿವರ ಇಂತಿದೆ.1ನೇ ವಾರ್ಡ್:  ರಾಮಚಂದ್ರ (ಬಿಜೆಪಿ), ರಾಮೇಗೌಡ (ಜೆಡಿಎಸ್) ಸಾಯಿ ಕುಮಾರ್ (ಕಾಂಗ್ರೆಸ್), ಪುಟ್ಟರಾಜು (ಕೆಜೆಪಿ), ಶ್ರೀನಿವಾಸ್, ಎಸ್.ಟಿ.ರಾಜು, ಲಕ್ಷ್ಮಮ್ಮ (ಪಕ್ಷೇತರ).2ನೇ ವಾರ್ಡ್: ರಾಧಿಕಾ (ಪಕ್ಷೇತರ), ಲಕ್ಷಮ್ಮ (ಕಾಂಗ್ರೆಸ್), ಸುಮಿತ್ರಾ (ಬಿಜೆಪಿ), ಸುಮಾ (ಜೆಡಿಎಸ್).3ನೇ ವಾರ್ಡ್: ಲಕ್ಷ್ಮಣ ಸಿಂಗ್ (ಬಿಜೆಪಿ), ವೆಂಕಟೇಶ್ (ಕಾಂಗ್ರೆಸ್), ಸಿದ್ದರಾಜು (ಜೆಡಿಎಸ್), ರಂಗಶೆಟ್ಟಿ (ಬಿಎಸ್‌ಆರ್ ಕಾಂಗ್ರೆಸ್).4ನೇ ವಾರ್ಡ್:  ಇಂದ್ರಮ್ಮ (ಕಾಂಗ್ರೆಸ್), ಭಾಗ್ಯಮ್ಮ ಕೃಷ್ಣ (ಜೆಡಿಎಸ್), ಭಾಗ್ಯ ಸಿದ್ದರಾಜು (ಬಿಜೆಪಿ) ಆಶಾ (ಬಿಎಸ್‌ಆರ್ ಕಾಂಗ್ರೆಸ್), ಗೌರಮ್ಮ (ಪಕ್ಷೇತರ).5ನೇ ವಾರ್ಡ್: ಉಮಾಶಂಕರ್ (ಬಿಜೆಪಿ), ಪಾರ್ಥಸಾರಥಿ (ಜೆಡಿಎಸ್), ನಂದೀಶ್ (ಪಕ್ಷೇತರ), ಎಸ್.ರಘು (ಕಾಂಗ್ರೆಸ್).6ನೇ ವಾರ್ಡ್: ದಾಕ್ಷಾಯಣಿ (ಜೆಡಿಎಸ್), ಲೀಲಾ (ಕಾಂಗ್ರೆಸ್), ವಿದ್ಯಾ (ಬಿಜೆಪಿ), ರೇವತಿ (ಬಿಎಸ್‌ಆರ್ ಕಾಂಗ್ರೆಸ್), ಕಾವೇರಮ್ಮ (ಪಕ್ಷೇತರ).7ನೇ ವಾರ್ಡ್:  ಕುಮಾರ್ (ಕಾಂಗ್ರೆಸ್), ದಿನೇಶ್  (ಜೆಡಿಎಸ್), ಮಂಜು (ಬಿಜೆಪಿ), ಶ್ರೀಕಂಠಯ್ಯ (ಕೆಜೆಪಿ), ನಂದೀಶ್, ಕೈಲಾಸ್ (ಪಕ್ಷೇತರ), 8ನೇ ವಾರ್ಡ್- ಪ್ರಕಾಶ್ (ಬಿಜೆಪಿ), ಸೋಮು (ಕಾಂಗ್ರೆಸ್), ಸುಂದರ್ ್ಜೆಡಿಎಸ್).9ನೇ ವಾರ್ಡ್:  ಬಿ.ನಳಿನಿ (ಕಾಂಗ್ರೆಸ್), ಸಣ್ಣಮ್ಮ (ಬಿಜೆಪಿ), ಹೇಮಲತಾ (ಜೆಡಿಎಸ್).10ನೇ ವಾರ್ಡ್: ಆರ್ಮುಗಂ ಕಿಶೋರ್ (ಬಿಜೆಪಿ), ಆರ್.ಕೃಷ್ಣಪ್ಪ (ಜೆಡಿಎಸ್), ಮಂಜುನಾಥ್ (ಕೆಜೆಪಿ), ಎಸ್.ಕುಮಾರ್ (ಕಾಂಗ್ರೆಸ್).11ನೇ ವಾರ್ಡ್:  ಜಯಲಕ್ಷಮ್ಮ (ಬಿಜೆಪಿ), ರೇಣುಕಾದೇವಿ (ಕಾಂಗ್ರೆಸ್), ರಾಜೇಶ್ವರಿ (ಜೆಡಿಎಸ್).12ನೇ ವಾರ್ಡ್: ಜಗನ್ನಾಥ (ಪಕ್ಷೇತರ), ವೆಂಕಟಪ್ಪ (ಕಾಂಗ್ರೆಸ್), ಚೇನತ್ (ಜೆಡಿಎಸ್), ಮರಿಸ್ವಾಮಿ (ಕೆಜೆಪಿ), ರಾಜೇಶ್ (ಬಿಜೆಪಿ), ಅಹಮದ್ (ಬಿಎಸ್‌ಆರ್ ಕಾಂಗ್ರೆಸ್).13ನೇ ವಾರ್ಡ್: ಮಾಯಾದೇವಿ (ಬಿಜೆಪಿ), ಶೋಭ (ಜೆಡಿಎಸ್), ಶಾರದಮ್ಮ (ಪಕ್ಷೇತರ), ರಾಧ (ಕಾಂಗ್ರೆಸ್), 14ನೇ ವಾರ್ಡ್: ರಾಮನ್ ಉನ್ನಿಸ್ (ಕಾಂಗ್ರೆಸ್), ಗಿರೀಶ್ (ಬಿಜೆಪಿ), ದೀನೇಶ್ (ಜೆಡಿಎಸ್), ಮಹಮದ್ ಪಾಷ (ಪಕ್ಷೇತರ).
'ಜನ ಸಾಮಾನ್ಯರನ್ನು
ಅಲೆದಾಡಿಸಬೇಡಿ'
ಪಾಂಡವಪುರ: ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ಜನ ಸಾಮಾನ್ಯರ ಸಮಸ್ಯೆ ಬಗ್ಗೆ ಹರಿಸಬೇಕೆಂದು ಅಧಿಕಾರಿಗಳಿಗೆ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಅರ್. ಗಿರಿಜೇಶ್ ಸೂಚನೆ ನೀಡಿದರು. ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಗೆ ಸಂಬಂಧ ಪಟ್ಟಂತೆ ಅಹವಾಲು ಸ್ವೀಕರಿಸಿ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ಸಾರ್ವಜನಿಕರನ್ನು ಅಲೆದಾಡಿಸಿದಂತೆ ಕೆಲಸ ಮಾಡಿಕೊಡುವ ಪ್ರವೃತ್ತಿ ಬೆಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಅಧಿಕಾರಿಗಳಿಗೆ ಸೂಚನೆ: ಗ್ರಾಮೀಣ ಪ್ರದೇಶದಿಂದ ಬರುವ ರೈತರಿಗೆ ಯಾವುದೇ ತೊಂದರೆ ಅಗದಂತೆ ಅವರ ಅರ್ಜಿ ತಕ್ಷಣದಲ್ಲಿ ಪರೀಶೀಲನೆ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸಿ ಹಾಗೆ ಅವರ ಜೊತೆ ಪ್ರೀತಿ ವಿಶ್ವಾಸದಿಂದ ಸ್ಪಂದಿಸಿ ಕೆಲಸ ಮಾಡಬೇಕೆಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರ 3 ಅರ್ಜಿಗಳನ್ನು ದೂರಿನಲ್ಲಿ ನೀಡಿದರು. ಇನ್ನು 3 ಜನರು ಮೌಖಿಕವಾಗಿ ಮಾತನಾಡಿ ತಮ್ಮ ಸಮಸ್ಯೆ ತೋಡಿಕೊಂಡರು. ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಜು, ತಹಸೀಲ್ದಾರ್ ಗ್ರೇಡ್-2 ಪಾಪಣ್ಣ ವಿವಿಧ ಇಲಾಖೆ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.