ಅಭ್ಯರ್ಥಿಗಳ ಗೆಲವಿಗೆ ಜೆಡಿಎಸ್ ಸಾಧನೆಯೇ ಶ್ರೀರಕ್ಷೆ: ಪುಟ್ಟರಾಜು
ಪಾಂಡವಪುರ: ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಸಾಧಿಸಲು ತಮ್ಮ ಜನಪರ ಕಾರ್ಯಕ್ರಮಗಳೇ ಶ್ರೀರಕ್ಷೆಯಾಗಿವೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದವರು ಕಳೆದ ಸಾಲಿನಲ್ಲಿ 18 ವಾರ್ಡ್ಗಳಲ್ಲಿ 16 ಸದಸ್ಯ ಅಯ್ಕೆಯಾಗಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳು ಜೊತೆಗೆ ನಾಗರಿಕರ ವಿಶ್ವಾಸ ಕೈ ಹಿಡಿಯಲಿವೆ ಎಂದರು.
ಈ ಹಿಂದೆ ಪಟ್ಟಣ ಯಾವ ರೀತಿ ಇತ್ತು. ಈಗ ಯಾವ ರೀತಿ ಬದಲಾವಣೆ ಅಗಿದೆ ಎಂಬುವುದನ್ನು ನಾಗರಿಕರು ಗುರುತಿಸಲಿದ್ದಾರೆ. ಮುಂದೆ ಇನ್ನು ಹೆಚ್ಚಿನ ರೀತಿ ಪಟ್ಟಣ ಸಮಗ್ರ ಅಭಿವೃದ್ಧಿಪಡಿಸಲು ಮತ್ತೆ ಜೆಡಿಎಸ್ ಅಭ್ಯರ್ಥಿಗಳನ್ನು 18 ವಾರ್ಡ್ಗಳಲ್ಲಿ ಆಶೀರ್ವಾದ ಮಾಡಿ ಕಳುಹಿಸಬೇಕೆಂದು ನಾಗರಿಕರಲ್ಲಿ ವಿನಂತಿಸಿಕೊಂಡರು.
ಪಟ್ಟಣ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ವಾರ್ಡ್ ನಂ.12 ರಲ್ಲಿ ಬಿಜೆಪಿ ಮುಖಂಡರು ನಾಮಪತ್ರ ಸಲ್ಲಿಸಿದ್ದರು. ಈಗ ಈ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ಅನಸೂಯ ಅವರಿಗೆ ಬೆಂಬಲಿಸಬೇಕೆಂದು ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಆರ್.ಕೋದಂಡ, ಚಂದ್ರಶೇಖರ್ ಅವರು ಜೆಡಿಎಸ್ ಸಿದ್ಧಾಂತ ಒಪ್ಪಿ ಬಿಜೆಪಿ ತೊರೆದು ಬಂದಿದ್ದಾರೆ. ಹಾಗೆ ಪಕ್ಷದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ ಎಂದು ಶಾಸಕ ಪುಟ್ಟರಾಜು ತಿಳಿಸಿದರು.
ಪಕ್ಷ 18 ವಾರ್ಡ್ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಪಕ್ಷದ ಅಭ್ಯರ್ಥಿಗಳನ್ನು ನಾಗರಿಕರು ಆಶೀರ್ವಾದ ಮಾಡಿ ಕಳುಹಿಸಿದರೆ ಮುಂದೆ ಪಟ್ಟಣ ಪಂಚಾಯಿತಿ ಸಮಗ್ರಹ ಅಭಿವೃದ್ಧಿ ರಾಜ್ಯದ ಭೂಪಟದಲ್ಲಿ ಗುರುತಿಸುವಂತೆ ಮಾಡಿ ತೋರುತ್ತದೆ. ಅದಕ್ಕೆ ಪಟ್ಟಣ ಜನರ ಆಶೀರ್ವಾದ ಮುಖ್ಯ ಎಂದರು.
ಪಕ್ಷದಲ್ಲಿ ಬಂಡಾಯವಾಗಿ ನಿಂತಿದ್ದರೆ ಅಂತಹವರ ಮನವೊಲಿಸಿ ನಿವೃತ್ತಿಗೆ ಸೂಚನೆ ನೀಡುತ್ತೇವೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದಾಗಿ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಶಾಸಕ ಪುಟ್ಟರಾಜು ಮನವಿ ಮಾಡಿಕೊಂಡರು.
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಆರ್.ಕೋದಂಡ, ಚಂದ್ರಶೇಖರ್, ಬೀರಶೆಟ್ಟಹಳ್ಳಿ, ನಟರಾಜ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಇ. ಧರ್ಮರಾಜ್, ಪ.ಪಂ. ಅಧ್ಯಕ್ಷ ಎಂ.ಗಿರೀಶ್, ಜೆಡಿಎಸ್ ಮುಖಂಡರಾದ ಹಿರೇಮರಳಿ ಚನ್ನೇಗೌಡ ಅನಸೂಯ ಉಪಸ್ಥಿತರಿದ್ದರು.
ಶಾಸಕ ಸಿ.ಎಸ್. ಪುಟ್ಟರಾಜು ಅವರು ಮನೆ ಮನೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

