'ದೇಗುಲ ನಿರ್ಮಾಣದಿಂದ ಸಾಮಾಜಿಕ ಶಾಂತಿ'
ಪಾಂಡವಪುರ: ಧರ್ಮ ಮತ್ತು ದೇವರನ್ನು ಸೃಷ್ಟಿ ಮಾಡಿದ್ದು ಮನುಷ್ಯ. ಆದರೆ, ಇಂದು ಮಾನವೀಯ ಸಂಬಂಧ ಮರೆಯಾಗುತ್ತಿವೆ. ಎಲ್ಲೆಡೆ ಸ್ವಾರ್ಥ ಮನೆ ಮಾಡಿ ಸಮಾಜ ಕಲುಷಿತಗೊಂಡಿದೆ. ನಿಸ್ವಾರ್ಥ, ಪ್ರಾಮಾಣಿಕ ಸೇವೆಯಿಂದ ಸಮಾಜದ ಒಳತಿಗೆ ಮುಂದಾಗಬೇಕಿದೆ ಎಂದು ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಬೀರಶೆಟ್ಟಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ, ರಾಮ, ಶ್ರೀಶಕ್ತಿಗಣಪತಿ, ಶ್ರೀಕೃಷ್ಣ ಹಾಗೂ ನವಗ್ರಹ ದೇವತೆಗಳ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಾವೆಲ್ಲರೂ ಒಂದಾಗಿ ಬದುಕಬೇಕು ಎಂಬು ಭಾವನೆ ಇದ್ದರೆ ಅದೇ ಧರ್ಮ. ಅದರೆ ನಾನು ಒಬ್ಬನೇ ಬದುಕಬೇಕು ಎಂಬುವುದು ಅಧರ್ಮ. ಸಮಾಜದ ಒಳತಿಗಾಗಿ ಎಲ್ಲರೂ ಪ್ರೀತಿ- ವಿಶ್ವಾಸದಿಂದ ಬದುಕಬೇಕು. ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಿಸಿ ಗ್ರಾಮದಲ್ಲಿ ಶಾಂತಿ- ನೆಮ್ಮದಿಯ ಬದುಕಿಗೆ ಪೂರಕ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಪಾಂಡವಪುರ ಪಟ್ಟಣದ ಬೇರಶೆಟ್ಟಹಳ್ಳಿ ಗ್ರಾಮಸ್ಥರು ಮತ್ತು ಯುವಕರ ಪರಿಶ್ರಮದಿಂದ ಉತ್ತರಮುಖಿಯಾಗಿ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿ ಪಟ್ಟಣ ಕೈ ಕಳಸಪ್ರಾಯವಾಗಿದೆ ಎಂದರು.
63 ಅಡಿಗಳ ಎತ್ತರದ ಆಂಜನೇಯಸ್ವಾಮಿ ವಿಗ್ರಹವನ್ನು ಸ್ಥಾಪನೆ ಮಾಡಿ ಮಾದರಿಯಾಗಿರುವ ಗ್ರಾಮಸ್ಥರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಈ ವಿಗ್ರಹ ಕೆತ್ತನೆ ಮಾಡಿರುವ ಶಿಲ್ಪಿ ಮೈಸೂರಿನ ಪರಮೇಶ್ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದು, ದೇವಸ್ಥಾನ ಈಗ ಸಾರ್ವಜನಿಕರಿಗೆ ಸಮರ್ಪಣೆ ಆಗಿದೆ. ಇನ್ನು ಮುಂದೆ ಪ್ರತಿ ಒಬ್ಬರೂ ಸಮಾಜದ ಒಳಿತಿಗಾಗಿ ಭಗವಂತನ ಅಶೀರ್ವಾದಿಂದ ಒಳ್ಳೆಯ ಆರೋಗ್ಯಕರ ಕೆಲಸ ಮಾಡಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ಬದುಕು ಕಾಣಲು ಮುಂದಾಗಬೇಕೆಂದು ಹಾರೈಸಿದರು.
ಕೆರೆತೊಣ್ಣೂರಿನಿಂದ 101 ಹೆಣ್ಣು ಮಕ್ಕಳು ಹೊತ್ತು ತಂದ ಕಳಸ ದಿಂದ ದೇವರಿಗೆ ಸಂಜೆ 4 ಗಂಟೆಗೆ ಗಂಗಾಪೂಜೆ, ಗೋಪೂಜೆ ಊರಿನ ಪ್ರಮುಖ ಬೀದಿಗಳಲ್ಲಿ ಕಲಶಗಳ ಸಮೇತ ಶೋಭಯಾತ್ರೆ ಯಾಗ, ಶಾಲಾ ಪ್ರವೇಶ, ಮಹಾಗಣಪತಿ ಪೂಜೆ, ಹೋಮ, ಹವನ ಕಾರ್ಯದೊಂದಿಗೆ ಮಹಾಪೂಜೆ ಕಲಶ ಸ್ಥಾಪನೆ ನವರತ್ನ ಸಮರ್ಪಣೆ ಮಹಾಮಂಗಳಾರತಿ ಕಾರ್ಯವನ್ನು ನೆರವೇರಿಸಿದರು.
ಗುರುವಾರ ಬೆಳಿಗ್ಗೆ ಮಹಾಗಣಪತಿ ಪೂಜೆ ನವಗ್ರಹ, ಹೋಮ, ಕೃಷ್ಣಹೋಮ, ಆಂಜನೇಯಸ್ವಾಮಿ ಪ್ರಾಣ, ಪ್ರತಿಷ್ಠಾಪನೆ, ಕುಂಭಾಭಿಷೇಕ, ಪಂಚಾಮೃತ, ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆಯನ್ನು ಬಂದ ಭಕ್ತಾಧಿಗಳಿಗೆ ನಡೆಸಿಕೊಟ್ಟರು.
ಶ್ರೀರಂಗಪಟ್ಟಣ ಖ್ಯಾತ ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಮತ್ತು ಚಂದ್ರಶೇಖರ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನೂತನ ರಥದ ಉದ್ಘಾಟನೆಯನ್ನು ಡಾ. ಸಿ.ರಾಜೇಶ್ವರಿ ನೆರವೇರಿಸಿ ಗ್ರಾಮಸ್ಥರಿಗೆ ಸಮರ್ಪಿಸಿದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸದಸ್ಯ ಎಲ್.ಡಿ. ರವಿ, ಯಜಮಾನ ಸಿದ್ದೇಗೌಡ, ಪ.ಪಂ. ಸದಸ್ಯ ಸಿ.ಚಿಕ್ಕತಮ್ಮೇಗೌಡ, ಮಮ್ಸುಲ್ ಅಧ್ಯಕ್ಷ ಕೈ.ವೈರಮುಡಿಗೌಡ, ವೀರಾಂಜನೇಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದೇವೇಗೌಡ, ಫೈಲ್ವಾನ್ ಚಿಕ್ಕಬೋರೇಗೌಡ, ಪ.ಪಂ. ಮಾಜಿ ಅಧ್ಯಕ್ಷ ಎ.ಅರ್. ನಾಸೀರ್, ಯ. ಜವರೇಗೌಡ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಜಕೀಯದಲ್ಲಿ ಎದುರಾಳಿಗಳಾದ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಇವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸುವ ಮೂಲಕ ರಾಜಕೀಯವಾಗಿ ಎದುರಾಳಿಯಾಗಿ ಚುನಾವಣೆಗೆ ಮಾತ್ರ ಇರಬೇಕು ನಂತರ ಇಬ್ಬರೂ ಒಂದಾಗಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿ ಎಂದು ಗ್ರಾಮಸ್ಥರು ಶುಭ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

