ಇಂದು ವೈದ್ಯನಾಥೇಶ್ವರ ಬ್ರಹ್ಮರಥೋತ್ಸವ
ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ಮಾ.4ರಂದು ಇತಿಹಾಸ ಪ್ರಸಿದ್ಧ ವೈದ್ಯನಾಥೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ. ಮಾ.4 ಸಂಜೆ ನಗರಕೆರೆ ಪಟ್ಟಲಾಂಭದೇವಿ, ಮದ್ದೂರಮ್ಮ, ಆಲೂರಮ್ಮ ದೇವರುಗಳ ಪಟದ ಉತ್ಸವದೊಂದಿಗೆ ವೈದ್ಯನಾಥೇಶ್ವರ,ಪ್ರಸನ್ನ ಪಾರ್ವತಾಂಬಾ ಅವರ ಉತ್ಸವ ನಡೆಯಲಿದೆ. ರಥೋತ್ಸದ ಅಂಗವಾಗಿ ಮದ್ದೂರಿನಿಂದ ವೈದ್ಯನಾಥಪುರಕ್ಕೆ ಕೆಎಸ್ಆರ್ಟಿಸಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಳೆ ಸರ್ಕಾರಿ ನೌಕರರಿಗೆ ಸ್ಪರ್ಧೆ
ಮದ್ದೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಮಾ.5ರಂದು ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರು ಹಾಗೂ ಮಹಿಳೆಯರಿಗೆ 100 ಮೀ., 800 ಮೀ., 4್ಗ100 ಮೀ ರಿಲೇಓಟ, ಉದ್ದಜಿಗಿತ, ಎತ್ತರ ಜಿಗಿತ, ಡಿಸ್ಕಸ್ ಎಸೆತ, ಜಾವೆಲಿನ್ ಎಸೆತ, ಗುಂಡು ಎಸೆತ ಸ್ಪರ್ಧೆ 2 ವಯೋವಾನದ ವಿಭಾಗದಲ್ಲಿ ಏರ್ಪಡಿಸಲಾಗಿದೆ. ವಾಲಿಬಾಲ್, ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್, ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ. ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕೂಚಿಪುಡಿ, ಭರತನಾಟ್ಯ, ಜಾನಪದ ನೃತ್ಯ ಸ್ಪರ್ಧೆಗಳೂ ನಡೆಯಲಿವೆ. ತಾಲೂಕಿನ ಆಸಕ್ತ ಸರ್ಕಾರಿ ನೌಕರರು ಬೆಳಗ್ಗೆ 9 ಗಂಟೆಗೆ ತಮ್ಮ ಹೆಸರು ನೋಂದಾಯಿಸಲು ಕೋರಿದೆ. ಭಾಗವಹಿಸುವ ಎಲ್ಲಾ ನೌಕರರಿಗೆ ಅನ್ಯಕಾರ್ಯ ನಿಮಿತ್ತ ರಜೆ ಸೌಲಭ್ಯ ನೀಡಲಾಗುವುದು ಎಂದು ತಾಲೂಕು ಅಧ್ಯಕ್ಷ ಸಿ.ರಾಜು ತಿಳಿಸಿದ್ದಾರೆ.
8ರಂದು ಗಿರಿಜಾ ಕಲ್ಯಾಣ ಮಹೋತ್ಸವ
ಮಂಡ್ಯ: ನೆಹರು ನಗರದ ಶ್ರೀಶಂಕರಮಠದ ಆವರಣದಲ್ಲಿ ಮಾ.8 ರಂದು ಗಿರಿಜಾ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಬೆಳಗ್ಗೆ 6.30ಕ್ಕೆ ಚಂದ್ರಮೌಳೇಶ್ವರ ಮಹನ್ಯಾಸ ಪೂರ್ವಕ ರುದ್ರಾಭಿಷೇಕದೊಂದಿಗೆ ಪೂಜಾ ಪುರಸ್ಕಾರ ನಡೆಯಲಿದೆ. ಸಂಜೆ 4 ಗಂಟೆಗೆ ಗಿರಿಜಾ ಕಲ್ಯಾಣ ಮಹೋತ್ಸವ, ಸಂಜೆ 7.30ಕ್ಕೆ ಸಾಮೂಹಿಕ ಭಜನೆ ನಡೆಯಲಿದೆ. ಮಹಾ ಸಂಕಲ್ಪ, ಮಂಗಳ ದ್ರವ್ಯ, ಸಂಕಲ್ಪ, ಪ್ರಸಾದ ಸೇವೆ ನಡೆಯಲಿದೆ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಗಿರಿಜಾ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

