ಬಿಜೆಪಿಗೆ ತಮ್ಮಣ್ಣ ಬೈ, ಜೆಡಿಎಸ್ಗೆ ಜೈ
ಮಂಡ್ಯ-ಭಾರತೀನಗರ: ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಬಿಜೆಪಿ ತೊರೆದು ಭಾನುವಾರ ಭಾರತೀನಗರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಧಿಕೃತವಾಗಿ ಜೆಡಿಎಸ್ಗೆ ಸೇರ್ಪಡೆಯಾದರು.
ಭಾರತೀನಗರದ ಕೇಂಬ್ರಿಡ್ಜ್ ಶಾಲೆಯ ಮುಂಭಾಗದ ಆವರಣದಲ್ಲಿ ನಡೆದ ಬೃಹತ್ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರ ಸಮ್ಮುಖ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮಣ್ಣ ಅವರಿಗೆ ಜೆಡಿಎಸ್ ಚಿಹ್ನೆಯ ಹಾರ ಹಾಕುವ ಮೂಲಕ ಅಧಿಕೃತ ಆಹ್ವಾನ ನೀಡಿದರು.
ರಸ್ತೆಯಲ್ಲೆ ಬಾವುಟ ಸಮರ್ಪಣೆ: ಇದಕ್ಕೂ ಮುನ್ನ ಭಾನುವಾರ ಸಂಜೆ 4.30ಕ್ಕೆ ರಾಹುಕಾಲ ಬರಲಿದೆ ಎಂಬ ಭಯದಿಂದಾಗಿ ಮೆರವಣಿಗೆ ಸಂದರ್ಭದಲ್ಲಿ 4.15ರ ಸುಮಾರಿಗೆ ರಸ್ತೆಯಲ್ಲೆ ಕುಮಾರಸ್ವಾಮಿ ಅವರು ತಮ್ಮಣ್ಣನವರಿಗೆ ಜೆಡಿಎಸ್ ಬಾವುಟ ಅರ್ಪಿಸಿ ಪಕ್ಷಕ್ಕೆ ಆಹ್ವಾನಿಸಿದರು. ನಂತರ ಆತುರ ಆತುರವಾಗಿ ಮೆರವಣಿಗೆಯಿಂದ ವೇದಿಕೆಗೆ ಆಗಮಿಸಿ ಉದ್ಘಾಟನೆ ಮತ್ತು ಸ್ವಾಗತಕ್ಕೂ ಮೊದಲೆ ಹಾರ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಕಲ್ಪನ ಗೈರು: ಮದ್ದೂರು ಶಾಸಕಿ ಕಲ್ಪನಾ ಸಿದ್ದರಾಜು ತಮ್ಮಣ್ಣ ಅವರ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಕುಮಾರಸ್ವಾಮಿ ಈ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದ್ದರೂ ಧರ್ಮಸ್ಥಳಕ್ಕೆ ಕಲ್ಪನಾ ತೆರಳಿ ಈ ಕಾರ್ಯಕ್ರಮಕ್ಕೆ ಗೈರಾದರು. ಆದರೆ, ಸಿದ್ದರಾಜು ಅಭಿಮಾನಿಗಳ ಬಳಗದಲ್ಲಿದ್ದ ಚಿಕ್ಕೋನಹಳ್ಳಿ ತಮ್ಮಣ್ಣ, ಎಂ.ಸಿ. ಬಸವರಾಜು, ವಿಜಯೇಂದ್ರ ಸೇರಿದಂತೆ ಬಹುತೇಕ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಮ್ಮಣ್ಣ ಅವರ ಜೊತೆಯಲ್ಲಿ ನೂರಾರು ಬೆಂಬಲಿಗರು ಜೆಡಿಎಸ್ಗೆ ಸೇರ್ಪಡೆಯಾಗದರು. ಈ ಸಂದರ್ಭ ಚಲುವರಾಯಸ್ವಾಮಿ ಹಾಲಿ ಮತ್ತು ಮಾಜಿ ಜಿಪಂ, ತಾಪಂ, ಗ್ರಾಪಂ ಸದಸ್ಯರಿಗೆ ಹಾರ ಹಾಕಿ ಬರಮಾಡಿಕೊಂಡರು.
ಪುರಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮದ್ದೂರಿನ ಬದಲು ಭಾರತೀನಗರದಲ್ಲಿ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ, ಭಾರತೀನಗರ ಪೋಸ್ಟರ್, ಬ್ಯಾನರ್ಗಳಿಂದ ತುಂಬಿ ಹೋಗಿತ್ತು. ತಮ್ಮಣ್ಣನವರ ಅಭಿಮಾನಿಗಳು ಬೆಂಗಳೂರು, ಮೈಸೂರು, ಮಂಡ್ಯದಿಂದ ಆಗಮಿಸಿದ್ದು ಎದ್ದು ಕಂಡಿತ್ತು.
ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಈ ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ಕರೆತರಲಾಗಿತ್ತು. ಊಟ, ತಿಂಡಿ ಸೇರಿದಂತೆ ಎಲ್ಲವನ್ನು ನೀಡಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

