ಕಳಪೆ ಅಕ್ಕಿ ವಿತರಣೆ: ಆರೋಪ
ಕ.ಪ್ರ ವಾರ್ತೆ ್ಣ ಭಾರತೀನಗರ ್ಣ ಮಾ.19
ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮವು ವ್ಯವಸಾಯ ಸೇವಾ ಸಹಕಾರ ಕಚೇರಿಗಳಿಗೆ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುತ್ತಿರುವ ಪಡಿತರ ಅಕ್ಕಿ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಎಂ. ದೊಡ್ಡಿ ಗ್ರಾಪಂ ಸದಸ್ಯ ಗುಡಿಗೆರೆ ರಾಘವೇಂದ್ರ, ಮುಖಂಡರಾದ ನಿಂಗರಾಜು, ಮಣಿಗೆರೆ ರಾಜಣ್ಣ, ಕೆ.ಪಿ. ದೊಡ್ಡಿ ಮುದ್ದೇಗೌಡ ಮಣಿಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಧಾನ್ಯ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಆರೋಪಿಸಿದ್ದಾರೆ.
ಪಡಿತರದಾರರು ಧಾನ್ಯ ಪಡೆಯಲು ಸಹಕಾರ ಸಂಘಕ್ಕೆ ಹೋದಾಗ ಚೀಲದಿಂದ ಅಕ್ಕಿಯನ್ನು ಕೆಳಗೆ ಸುರಿಯುವ ಸಂದರ್ಭದಲ್ಲಿ ಹುಳುಗಳು ಇರುವುದನ್ನು ಗಮನಿಸಿದ್ದಾರೆ.
ನಂತರ ಇದಕ್ಕೆ ಸಂಬಂಧಿಸಿದಂತೆ ತಾಲೂಕು ಆಹಾರ ನಿರೀಕ್ಷಕರಿಗೆ ಈ ಕುರಿತು ದೂರವಾಣಿ ಮೂಲಕ ಕಳಪೆ ಗುಣಮಟ್ಟದ ಅಕ್ಕಿ ವಿತರಿಸಿದ್ದೀರಿ. ಇದನ್ನು ಪರಿಶೀಲಿಸಿ ನಂತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಕಳಪೆ ಗುಣಮಟ್ಟದ ಅಕ್ಕಿಯನ್ನು ದಾಸ್ತಾನು ಮಾಡುವ ರಾಜ್ಯ ಆಹಾರ ಉಗ್ರಾಣ ನಿಗಮವು ಉತ್ತಮ ನಿರ್ವಹಣೆ ಮಾಡುವ ಮೂಲಕ ಗುಣಮಟ್ಟದ ಪಡಿತರ ಧಾನ್ಯ ವಿತರಿಸಲು ಸರಿಯಾದ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

