ಸಡಿಲವಾಗುತ್ತಿರುವ ದಾಂಪತ್ಯ ಬದುಕು
ಕ.ಪ್ರ.ವಾರ್ತೆ ಮಂಡ್ಯ ಮಾ. 19
ಆಧುನಿಕ ಪ್ರಪಂಚದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಮೂಲಕ ವಧು- ವರರ ಅನ್ವೇಷಣೆ ನಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕೆಲವೇ ತಿಂಗಳುಗಳಲ್ಲಿ ಸಂಸಾರದಲ್ಲಿ ಬಿರುಕು ಕಾಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ರಾಜ್ಯ ಪರಿಶಿಷ್ಟಜಾತಿ, ವರ್ಗದ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಶೇಖರ್ ವಿಷಾದಿಸಿದರು.
ನಗರದ ಗುರುಭವನದಲ್ಲಿ ಕರ್ನಾಟಕ ಅಂಬುದ್ದ ಸಾಂಸ್ಕೃತಿಕ ವೇದಿಕೆ ವತಿಯಿಂದ ವಧು- ವರರ ಪ್ರಥಮ ಮುಖಾಮುಖಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ವಧು- ವರರನ್ನು ಅನ್ವೇಷಣೆ ಮಾಡಲು ಪೋಷಕರು ಮಾತ್ರ ಭಾಗವಹಿಸಿ ಮದುವೆ ನಿಶ್ಚಿಯಿಸುತ್ತಿದ್ದರು. ವಧು- ವರ ಯಾವುದೇ ಕಾರಣಕ್ಕೂ ಮುಖಾಮುಖಿ ಭೇಟಿ ಸಾಧ್ಯವಿರುತ್ತಿರಲಿಲ್ಲ. ಮದುವೆಯ ನಂತರವಷ್ಟೇ ಸಂಗಾತಿಗಳು ತಮ್ಮ ಭಾವನೆಗಳನ್ನು ಮತ್ತು ಮುಖ ಪರಿಚಯ ಮಾಡಿಕೊಳ್ಳುವ ಸಂಪ್ರದಾಯವಿತ್ತು. ಕಾಲ ಬದಲಾದಂತೆ ಆಧುನಿಕತೆ ಬೆಳೆದಂತೆ ಎಲ್ಲವೂ ಬದಲಾಗುತ್ತಾ ಇಂಟರ್ನೆಟ್, ಮೊಬೈಲ್ನಲ್ಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ದಿನಗಳು ಎದುರಾಗಿವೆ ಎಂದರು.
ಕರ್ನಾಟಕ ರಾಜ್ಯ ಪ. ಜಾತಿ ಮತ್ತು ವರ್ಗದ ನೌಕರರ ಒಕ್ಕೂಟದ ಅಧ್ಯಕ್ಷ ದೇವದಾಸ್ ಮೊದಲಿಗ ಮಾತನಾಡಿ, ಸಮಾಜದಲ್ಲಿ ಜಾತಿ, ಕೋಮು ಸೌಹಾರ್ದತೆ ಮರೆತು ಸಾಮರಸ್ಯ ಜೀವನ ನಡೆಸಬೇಕು. ಜಾತಿ ಜಾತಿಗಳ ನಡುವೆ ಭೇದ, ಸಂಘರ್ಷ ಸಮಾಜದ ಏಳಿಗೆಗೆ ಮಾರಕ. ಅಂಬೇಡ್ಕರ್ ಮತ್ತು ಬುದ್ಧ, ಬಸವ ಇವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮಹದೇವ ಕೊತ್ತತ್ತಿ, ದಿನೇಶ್ ಮಾಗಧಿ, ಡಿ.ನಿಂಗಪ್ಪ, ಶಿವರಾಜ್, ಗಂಗಾಧರ್ ಗೆಜ್ಜಲಗೆರೆ, ಜೆ.ನಾಗರಾಜು, ಸಿದ್ದನಂಜಯ್ಯ, ರಾಜಯ್ಯ, ಆಶಾರಾಣಿ, ಪಾಪಣ್ಣ, ಕಾಳಯ್ಯ, ಜಯರಾಮು ರೇಷ್ಮೆ, ಸಿದ್ದನಂಜಯ್ಯ, ಶ್ರೀನಿವಾಸ್ಮೂರ್ತಿ, ವೆಂಕಟರಾಮಯ್ಯ ಇದ್ದರು. ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಮಾಡಿಸಿಕೊಂಡು ಅನ್ವೇಷಣೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

