ಮಂಡ್ಯ

ಸರ್ಕಾರಿ ಕಚೇರಿ ಗೋಡೆ ಸ್ವಚ್ಛತೆಗೆ ಸೂಚನೆ

Published On :

ಕ.ಪ್ರ.ವಾರ್ತೆ ಮಂಡ್ಯ   ಮಾ. 19
ಗಬ್ಬೆದ್ದು ಹೋಗಿರುವ ನಗರದ ಸರ್ಕಾರಿ ಕಚೇರಿಗಳ ಹೊರ ಗೋಡೆಗಳನ್ನು ಕ್ಲೀನ್ ಮಾಡುವ ಅಭಿಯಾನವನ್ನು ಮಂಡ್ಯ ನಗರಸಭೆ ಆರಂಭಿಸಿದೆ. ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ನಗರಸಭೆಯ ಆಯುಕ್ತೆ, ಐಎಎಸ್ ಅಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಾಪಾಟಿ (ಉಪ ವಿಭಾಗಾಧಿಕಾರಿ ತರಬೇತಿ) ನಗರದ ಅಂದ ಕಾಪಾಡುವ ಮೊದಲ ಹೆಜ್ಜೆಯಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.  
ನಗರದಲ್ಲಿರುವ ಸರ್ಕಾರಿ ಕಚೇರಿಗಳ ಕಟ್ಟಡ ಮತ್ತು ಹೊರ ಗೋಡೆಗಳನ್ನು ಕ್ಲೀನ್ ಮಾಡಿ ಸುಣ್ಣ ಅಥವಾ ಬಿಳಿ ಬಣ್ಣ ಬಳಿಸುವಂತೆ ನಗರಸಭೆ ಎಲ್ಲಾ ಕಚೇರಿಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ. ಒಂದು ವಾರ ಸಮಯ ನೀಡಿದೆ. ಈ ಅವಧಿಯೊಳಗೆ ಮುಖ್ಯಸ್ಥರು ಯಾವುದೇ ಆರ್ಥಿಕ ಹೊರೆ ಆಗದಂತೆ ಸೇವೆಯ ಮೂಲಕ ಗೋಡೆ ಕ್ಲೀನ್ ಮಾಡಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.  ಬಣ್ಣ ಅಥವಾ ಸುಣ್ಣ ಹೊಡೆದ ಗೋಡೆಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ 18 ವರ್ಷದ ಯುವಕರು ನವ ಮತದಾರರಾಗಿರುತ್ತಾರೆ. ಇವರು ಕಡ್ಡಾಯ ಮತದಾನ ಮಾಡುವುದರ ಮಹತ್ವ ಹಾಗೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡುವ ಬರಹ (ಸ್ಲೋಗನ್)ಗಳನ್ನು ಬರೆಸಲಾಗುವುದು ಎಂದು ಹೇಳಿದರು.
ಗೋಡೆಗಳ ಮೇಲೆ ಗಲೀಜು ಮಾಡುವುದನ್ನು ತಪ್ಪಿಸುವುದು ಹಾಗೂ ಕ್ಲೀನ್ ಸಿಟಿ ಮಾಡುವ ಪರಿಕಲ್ಪನೆಗೆ ಈ ಯೋಜನೆ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು. ನಗರದ ತುಂಬೆಲ್ಲಾ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ತಾವು ಸಧ್ಯದಲ್ಲೇ ಸಿಬ್ಬಂದಿ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ (ತರಬೇತಿ) ಶಿವಾನಂದ ಕೂಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.