ಮಳವಳ್ಳಿ: ಮನೆಯೊಂದರ ಮೇಲೆ ದಾಳಿ ನಡೆಸಿದ ಬೆಳಕವಾಡಿ ಪೊಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 240 ಮದ್ಯದ ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕುಂದೂರು ಗ್ರಾಮದ ದುಂಡಮ್ಮ ಎಂಬುವರ ಮನೆಯಲ್ಲಿ ಅವರ ಅಳಿಯ ಮಹೇಶ್ ಎಂಬಾತ ಅಕ್ರಮವಾಗಿ ಮದ್ಯದ ಬಾಟಲ್ಗಳನ್ನು ಸಂಗ್ರಹಿಸಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ 7.30 ರ ಸಮಯದಲ್ಲಿ ತಮ್ಮ ಸಿಬ್ಬಂದಿ ಜೊತೆ ಮನೆ ಮೇಲೆ ದಾಳಿ ನಡೆಸಿರುವ ಬೆಳಕವಾಡಿ ಸಬ್ಇನ್ಸ್ಪೆಕ್ಟರ್ ಎನ್.ವಿ. ಮಹೇಶ್ ಹಾಗೂ ಸಿಬ್ಬಂದಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 240 ಮದ್ಯದ ಬಾಟಲ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳಕವಾಡಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.