ಮೈಸೂರು

ಅಂಧಶ್ರದ್ಧೆ ವಿಜ್ಞಾನ ಪ್ರಗತಿಗೆ ಮಾರಕ: ವೆಂಕಟರಾಮಯ್ಯ

Published On :

ಕ.ಪ್ರ.ವಾರ್ತೆ ಮೈಸೂರು ಆ. 1
ಸಮಾಜದಲ್ಲಿನ ಅಂಧಶ್ರದ್ಧೆಯು ವಿಜ್ಞಾನ ಪ್ರಗತಿಗೆ ಮಾರಕ ಎಂದು ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ಹೇಳಿದರು.
ಪ್ರಾದೇಶಿಕ ಶಿಕ್ಷಣ ಸಂಸ್ಥೆಯು 51ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸರ್ದಾರ್ ಪಣಿಕ್ಕರ್ ಸ್ಮಾರಕ ಉಪನ್ಯಾಸದಲ್ಲಿ ವಿಜ್ಞಾನ, ಸಂಸ್ಕೃತಿ ಮತ್ತು ಸಮಾಜ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಸೂರ್ಯಗ್ರಹಣ ಅಥವಾ ಚಂದ್ರ ಗ್ರಹಣಗಳು ಆಕಾಶಕಾಯದಲ್ಲಿ ನಡೆಯುವ ಪ್ರಕೃತಿಯ ಆಟ. ಆದರೆ, ಅದನ್ನು ವೀಕ್ಷಿಸಿದರೆ ತೊಂದರೆಯಾಗಲಿದೆ ಎನ್ನುವ ತಪ್ಪು ಕಲ್ಪನೆಯನ್ನು ಜೋತಿಷಿಗಳು ಮೂಡಿಸುವ ಮೂಲಕ ನಮ್ಮ ಯುವಜನಾಂಗವನ್ನು ದಾರಿ ತಪ್ಪಿಸುತ್ತಿದ್ದಾರೆ.
ಕಂಪ್ಯೂಟರ್ ಬಳಸಿ ಜೋತಿಷ್ಯ ಹೇಳುವವರು ಜನಸಾಮಾನ್ಯರನ್ನು ತಪ್ಪು ಕಲ್ಪನೆಯತ್ತ ದೂಡುವುದು ಸರಿಯಲ್ಲ ಎಂದರು.
ಜಗತ್ತಿನಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಎಂಬ ಎರಡು ಮನೋಭಾವದ ಜನರಿದ್ದು, ಈ ಎರಡು ಭಾವನೆಗಳು ಮನುಷ್ಯನ ಬುದ್ಧಿಶಕ್ತಿಯಿಂದಲೇ ಹೊರಹೊಮ್ಮಿರುವುದು. ಆದರೆ, ಈ ದೃಷ್ಟಿಕೋನಗಳು ಪರಸ್ಪರ ವಿರುದ್ಧವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಿ.ಜಿ. ರಾವ್ ಸ್ವಾಗತಿಸಿದರು. ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ವಿ.ಡಿ. ಭಟ್ ಸಂಸ್ಥೆಯ ಕಾರ್ಯ ಚಟುವಟಿಕೆ ಕುರಿತು ಮಾತನಾಡಿದರು. ಡಿಇಇ ಮುಖ್ಯಸ್ಥ ಪ್ರೊ. ಬಿ.ಎಸ್. ಉಪಾಧ್ಯಾಯ ವಂದಿಸಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.