ಮೈಸೂರು

ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ ಮೈಸೂರು ಆ. 2
ಇಲ್ಲಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿರುವ ಮೂರು ದಿನಗಳ ಕೈಗಾರಿಕಾ ವಸ್ತು ಪ್ರದರ್ಶನವು ಶುಕ್ರವಾರ ಆರಂಭವಾಯಿತು.
ಈಜೀಸರ್ಚ್ ಇನ್ಫೋಮಿಡೈರಿ ಪ್ರೈವೇಟ್ ಲಿಮಿಟೆಡ್ ಶುಬೋಧಿನಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಮೈ ಇನ್ ಎಕ್ಸಫೋ- 2013 ರ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟಗಾರರ ಅಭವೃದ್ಧಿ ಕಾರ್ಯಕ್ರಮವನ್ನು ಶಾಸಕ ವಾಸು ಉದ್ಘಾಟಿಸಿದರು.
ನಂತರ ಮಾತನಾಡಿ, ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದು ಹೆಚ್ಚಿನ ಜನರು ಉದ್ಯಮಕ್ಕೆ ಮುಂದಾಗಬೇಕು ಎಂದರು.
ಈ ಕ್ಷೇತ್ರಕ್ಕೆ ಬರುವ ಯುವ ಉದ್ಯಮಿಗಳಿಗೆ ಇಂತಹ ಕಾರ್ಯಕ್ರಮ ತುಂಬ ಉಪಯುಕ್ತವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಉದ್ಯಮಶೀಲರಾಗಬೇಕು. ಸಂಸ್ಥೆಯು ಮೈಸೂರಿನಲ್ಲಿ ಈ ರೀತಿಯ ವಸ್ತು ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಎಫ್ಕೆಸಿಸಿಐ ಅಧ್ಯಕ್ಷ ಆರ್. ಶಿವಕುಮಾರ್, ಎಂಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಎಂಐಎ ಅಧ್ಯಕ್ಷ ಪಿ. ವಿಶ್ವನಾಥ್, ಎನ್.ಆರ್. ಗ್ರೂಫ್ ಅಧ್ಯಕ್ಷ ಆರ್. ಗುರು, ಉದ್ಯಮಿ ಡಾ. ಪಿ.ಆರ್. ಪೈ, ವಕೀಲ ಹರೀಶ್ ಕುಮಾರ್ ಹೆಗಡೆ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಡಿಜಿಎಂ ಇ. ಎಸ್. ನಾಗರಾಜ ಉಡುಪ ಅತಿಥಿಯಾಗಿದ್ದರು.  
ಕಾರ್ಯಕ್ರಮದ ಆಯೋಜಕರು ಹಾಗೂ ಈಸೀಸರ್ಚ್ ಇನ್ಫೋಮಿಡೈರಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಸೋಮಶೇಖರ್ ಹಾಗೂ ನಿರ್ದೇಶಕಿ ಎಸ್. ಶ್ರೀವಿದ್ಯಾ ಇದ್ದರು.  
ಪ್ರದರ್ಶನದಲ್ಲಿ ಕೈಗಾರಿಕೆಗಳ ಉತ್ಪನ್ನಗಳು, ಸಾಧನ ಸಲಕರಣೆಗಳು, ಯಂತ್ರೋಪಕರಣಗಳನ್ನು ಸಾದರಪಡಿಸಲಾಗಿದೆ. ಅಲ್ಲದೆ, ಉದ್ಯಮದ ಸ್ಥಾಪನೆ, ವಿಸ್ತರಣೆ, ಅಭಿವೃದ್ಧಿಯ ಮಾಹಿತಿ, ಹಣಕಾಸು ನೆರವು ಮುಂತಾದ ವಿವರಗಳು ಲಭ್ಯವಿದೆ. ಮೈಸೂರು ಕೈಗಾರಿಕೆಗಳ ಸಂಘದ ವ್ಯಾಪ್ತಿಯಲ್ಲಿರುವ 30- 40 ಸಣ್ಣ ಕೈಗಾರಿಕೆಗಳು ಮಳಿಗೆ ತೆರೆದು ಉತ್ಪನ್ನಗಳನ್ನು ಪ್ರದರ್ಶಿಸಿವೆ. ಎನ್ಐ, ಬಿಐಎ, ಕ್ಯಾನನ್, ಒಜೆಯುಎಸ್, ಜೆಎಂಎಂಸಿಒ, ಮೆಟಬೊ, ಎಂಎಂಐ, ಎಂಎಚ್ಐ ಇತರೆ ಸಂಸ್ಥೆಗಳು ಭಾಗವಹಿಸಿವೆ.      

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.