ಮೈಸೂರು

ಸಹಕಾರ ಭಾರತೀಯ ಕರ್ನಾಟಕ ಪ್ರಾಂತ್ಯ ಅಭ್ಯಾಸ ವರ್ಗ ಆರಂಭ

Published On :

ಕ.ಪ್ರ.ವಾರ್ತೆ ಮೈಸೂರು ಆ. 3
ಸಹಕಾರ ಭಾರತೀಯ ಕರ್ನಾಟಕ ಪ್ರಾಂತ್ಯದಿಂದ ಏರ್ಪಡಿಸಿರುವ ಎರಡು ದಿನಗಳ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ರಾಷ್ಟ್ರೀಯ ಸಹಕಾರ ಭಾರತಿ ಅಧ್ಯಕ್ಷ ಸತೀಶ್ ಮರಾಠೆ ಅವರು ಶನಿವಾರ ಹೂಟಗಳ್ಳಿಯ ಬಿ.ಎನ್. ರಾವ್ ಸಭಾಂಗಣದಲ್ಲಿ ಉದ್ಘಾಟಿಸಿದರು. ಈ ಎರಡು ದಿನದ ಅಭ್ಯಾಸ ವರ್ಗದಲ್ಲಿ ಸಹಕಾರ ಭಾರತೀಯ ಪರಿಚಯ, ಸಹಕಾರಿ ಕ್ಷೇತ್ರದ ಸವಾಲುಗಳು ಮತ್ತು ಅವಕಾಶಗಳು, ಸಹಕಾರ ನಾಯಕತ್ವ, ಮುಂದಿನ ಕ್ರಿಯಾಯೋಜನೆ, ಸಹಕಾರಿ ಕಾಯಿದೆ 97ನೇ ತಿದ್ದುಪಡಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗುತ್ತದೆ. ಸಹಕಾರ ಭಾರತಿ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ್, ರಾಷ್ಟ್ರೀಯ ಕಾರ್ಯದರ್ಶಿ ಕರುಣಾಕರನ್, ಪ್ರಧಾನ ಕಾರ್ಯದರ್ಶಿ ಗುರುನಾಥ್ ಜ್ಯೋತಿಂಕರ್, ಉತ್ತರ ಪ್ರಾಂತ್ಯದ ಅಧ್ಯಕ್ಷ ಚೊಕ್ಕ ಬಸವನಗೌಡ, ರಾಜ್ಯ ಸೌಹಾರ್ದ ಫೆಡರೇಷನ್ ಅಧ್ಯಕ್ಷ ಸತೀಶ್‌ಚಂದ್ರು, ಸಂಘಟನಾ ಪ್ರಮುಖ್ ಎಸ್.ಆರ್. ನಾರಾಯಣರಾವ್, ರಾಷ್ಟ್ರೀಯ ಪ್ರಭಾರಿ ರಮೇಶ್ ವೈದ್ಯ, ಖಜಾಂಚಿ ವೆಂಕಟೇಶ್, ಜಿಲ್ಲಾಧ್ಯಕ್ಷ ಚಿದಂಬರ, ನಗರಾಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ ಹಿನ್ಕಲ್, ಎಸ್.ಆರ್. ಗೋಪಾಲರಾವ್, ಕರ್ನಾಟಕ ರಾಜ್ಯ ತೆಂಗಿನ ನಾರಿನ ಮಹಾಮಂಡಳಿ ಮಾಜಿ ನಿರ್ದೇಶಕ ಡಿ.ಎಸ್. ಶಿಂಧೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.