ಮೈಸೂರು

ಪರಮೇಶ್ವರ್, ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬ

Published On :

ಕ.ಪ್ರ.ವಾರ್ತೆ   ಮೈಸೂರು   ಆ. 6
ವಿ. ಙಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗದಿಂದ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ಅಶೋಕಪುರಂನಲ್ಲಿರುವ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ನಿವಾಸಪ್ರಸಾದ್ ಉತ್ತಮ ಆಡಳಿತಗಾರರು. ದೀನ ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನಾಯಕ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದ ಹಾಗೆ ಪಾರದರ್ಶಕ ಆಡಳಿತ ನೀಡಿದ್ದಾರೆ ಎಂದರು.
ಮಾಜಿ ಮೇಯರ್ ಪುರುಷೋತ್ತಮ್, ಮಾಜಿ ಉಪಮೇಯರ್  ಬಿ. ಸಿದ್ದರಾಜು, ಮುಖಂಡರಾದ ನಂದಕುಮಾರ್, ದೇಶಿಗೌಡ, ಯೋಗೀಶ್ವರ್, ಡಾ. ಮುಳ್ಳೂರು ನಂಜುಂಡಸ್ವಾಮಿ, ಸತೀಶ್, ಶಿವಕುಮಾರ್, ರಮೇಶ್, ವೆಂಕಟರಾಜು, ಮಹೇಶ್ಗಿರಿ, ಸುರೇಶ್ ಮತ್ತಿತರರು ಇದ್ದರು.
ಸಸಿ ನೆಟ್ಟು ಆಚರಣೆ...
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬದ ಅಂಗವಾಗಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ದೈವಿವನದಲ್ಲಿ ಸಸಿ ನೆಡಲಾಯಿತು. ಮಾಜಿ ಸಂಸದ ಸಿದ್ದರಾಜು, ಮಾಜಿ ಮೇಯರ್ಗಳಾದ ಟಿ.ಬಿ. ಚಿಕ್ಕಣ್ಣ, ದಕ್ಷಿಣಾಮೂರ್ತಿ, ಬಿ.ಕೆ. ಪ್ರಕಾಶ್, ಪಾಲಿಕೆ ಸದಸ್ಯ ಡಿ. ನಾಗಭೂಷಣ್, ಮಾಜಿ ಸದಸ್ಯ ಎಂ. ಶಿವಣ್ಣ, ಸುಶೀಲಾ ಕೇಶವಮೂರ್ತಿ, ರಾಜಶೇಖರಮೂರ್ತಿ, ಶ್ರೀನಿವಾಸ, ಭಾಸ್ಕರ್, ಆರ್. ಮೂರ್ತಿ, ಭಾಸ್ಕರ್, ಶಿವಮಲ್ಲು, ಮೈಸೂರು ಬಸವಣ್ಣ ಸೇರಿದಂತೆ ಮತ್ತಿತರರು ಇದ್ದರು.
ಭಿಕ್ಷುಕರಿಗೆ ಸನ್ಮಾನ, ಸಹ ಪಂಕ್ತಿ ಭೋಜನ...
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬ ಅಂಗವಾಗಿ ನಗರ ಕಾಂಗ್ರೆಸ್ ಸಮಿತಿಯಿಂದ ನಗರದ ನಿರಾಶ್ರಿತರ ಭಿಕ್ಷುಕ ಕೇಂದ್ರದ  ನಿರಾಶ್ರಿತರನ್ನು ಸನ್ಮಾನಿಸಲಾಯಿತು. ಸುಮಾರು 180 ನಿರಾಶ್ರಿತರಿಗೆ ಶಾಲು ಹೊದಿಸಿ ಸಿಹಿ ಹಂಚಿ, ಸಹಪಂಕ್ತಿ ಭೋಜನ ಏರ್ಪಡಿಸಲಾಗಿತ್ತು. ಇದಕ್ಕೂ ಮೊದಲು ಒಡನಾಡಿ ಸೇವಾ ಸಂಸ್ಥೆಯ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಕೈಗಾರಿಕೋದ್ಯಮಿ ಪಿ. ಸತೀಶ್, ಕೆಪಿಸಿಸಿ ಸದಸ್ಯ ವಿ. ರಾಮಸ್ವಾಮಿ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಜಿ. ಶಿವಕುಮಾರ್, ಕಾರ್ಯದರ್ಶಿ ಶಿವಣ್ಣ, ಹಿಂದುಳಿದ ವರ್ಗಗಳ ಅಧ್ಯಕ್ಷ ಕೋಟೆಹುಂಡಿ ಮಹದೇವು, ಡಾ. ನಂಜುಂಡಸ್ವಾಮಿ, ನಿರಾಶ್ರಿತರ ಕೇಂದ್ರದ ಅಧೀಕ್ಷಕ ಚಂದ್ರಪ್ಪ, ರಮೇಶ್ ಮತ್ತಿತರರು ಇದ್ದರು.
ಮೂಕ ಮಕ್ಕಳಿಗೆ ಹೋಳಿಗೆ...
ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ 63ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಯುಎಸ್ಎ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಪುಟ್ಟೀರಮ್ಮ ಶಾಲೆಯ ಮೂಕ ಮಕ್ಕಳಿಗೆ ಹೋಳಿಗೆ ವಿತರಿಸಲಾಯಿತು. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ವೈ. ಶಿವೇಗೌಡ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಎನ್.ಆರ್. ನಾಗೇಶ್, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್. ರವಿ, ಹೆಬ್ಬಾಳ್ ಎಸ್. ಕುಮಾರ್, ರಂಗಸ್ವಾಮಿ, ಚೆಲುವರಾಜ್, ಸುರೇಸ್, ಗೋವಿಂದರಾಜು ಮತ್ತಿತರರು ಇದ್ದರು.


ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ


ಮೈಸೂರು: ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್ ಅಭಿಮಾನಿಗಳ ಬಳಗದಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಹುಟ್ಟುಹಬ್ಬದ ಅಂಗವಾಗಿ ಗಾಂಧಿನಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ನೋಟ್ ಪುಸ್ತಕ ಹಾಗೂ ಸಿಹಿ ವಿತರಿಸಿದರು. ಬಳಗದ ರಾಜ್ಯಾಧ್ಯಕ್ಷ ಪಿ. ರಾಜು, ಸಂಚಾಲಕ ಶೌಕತ್ ಅಲಿಖಾನ್, ಮುಖಂಡರಾದ ರಘುರಾಜೇ ಅರಸ್, ರುದ್ರಮೂರ್ತಿ, ಸಿದ್ದರಾಜ ಅರಸ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.