ಮೈಸೂರು

ಕುಶಲಕರ್ಮಿಗಳಿಗೆ ಪರವಾನಗಿ ನೀಡಲು ಮನವಿ

Published On :

ಕ.ಪ್ರ.ವಾರ್ತೆ    ಮೈಸೂರು    ಆ. 13
ಅರ್ಹ ಬಡ ಚರ್ಮ ಕುಶಲಕರ್ಮಿಗಳಿಗೆ, ಆಧುನಿಕ ಮಾರಾಟ ಮಳಿಗೆಗಳಿಗೆ ಪಾಲಿಕೆ ವತಿಯಿಂದ ಪರವಾನಗಿ ನೀಡಲು ಆದೇಶ ಹೊರಡಿಸುವಂತೆ ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಲಿಡ್ಕರ್ ವ್ಯವಸ್ಥಾಪಕರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮನವಿ ಮಾಡಿದ್ದಾರೆ.
ಡಾ. ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ವತಿಯಿಂದ ಬಡ ಚರ್ಮ ಕುಶಲಕರ್ಮಿಗಳಿಗೆ ಆರ್ಥಿಕಾಭಿವೃದ್ಧಿ ಯೋಜನೆಯಡಿಯಲ್ಲಿ ಆಧುನಿಕ ಚರ್ಮ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಗ್ರಾಹಕರಿಗೆ ಚರ್ಮ ಉತ್ಪನ್ನಗಳನ್ನು ಚರ್ಮಕುಶಲ ಕರ್ಮಿಗಳು, ನೇರವಾಗಿ ಮಾರಾಟ ಮಾಡುವ ಸದುದ್ದೇಶದಿಂದ ಅರ್ಜಿ ಕರೆದು, 49 ಜನ ಅರ್ಹ ಕುಶಲಕರ್ಮಿಗಳು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿದ್ದಾರೆ. ಆದ್ದರಿಂದ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಳಿಗೆ ಅಳವಡಿಸಿಕೊಂಡು ಚರ್ಮ ಕುಶಲಕರ್ಮಿಗಳು ಜೀವನ ನಿರ್ವಹಣೆ ಮಾಡಲು ಅನುಕೂಲ ಕಲ್ಪಿಸಿಕೊಡುವಂತೆ ಕೋರಿದ್ದಾರೆ.
ಮುಖಂಡ ದೇವೇಂದ್ರಪ್ಪ, ಅಧ್ಯಕ್ಷ ಬಿ. ಬಸಪ್ಪ, ಲಿಡ್ಕರ್ ವ್ಯವಸ್ಥಾಪಕ ಎಚ್.ವೈ. ಕುಮಾರ್ ರಾಜೇ ಅರಸು, ಕೃಷ್ಣ, ರಾಮು, ಮಲ್ಲಿಕ್, ಚಂದ್ರಶೇಖರ್, ಬಿ. ಸುರೇಶ್, ಶ್ರೀನಿವಾಸ, ರಮೇಶ್, ಮರಿಸ್ವಾಮಿ, ನಿಂಗರಾಜು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.