ಸೇವಕರ ತರಬೇತಿ
ಮೈಸೂರು: ನೆಹರು ಯುವ ಕೇಂದ್ರ ಹಾಗೂ ಅಭ್ಯುದಯ ಮಹಿಳಾ ಸಮಾಜದಿಂದ ಆ.19ರ ಮಧ್ಯಾಹ್ನ 3ಕ್ಕೆ ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ರಾಷ್ಟ್ರೀಯ ಯುವ ಪಡೆಯ ಸ್ವಯಂ ಸೇವಕರ ತರಬೇತಿ ಶಿಬಿರ ಏರ್ಪಡಿಸಿದ್ದು, ಅಬಕಾರಿ ಉಪ ಆಯುಕ್ತ ಡಾ.ವೈ. ಮಂಜುನಾಥ್ ಉದ್ಘಾಟಿಸುವರು.
ರಕ್ತದೊತ್ತಡ ನಿವಾರಣೆ
ಆಲನಹಳ್ಳಿಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಆ.19 ರಿಂದ 24 ರವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಧಿಕ ರಕ್ತದೊತ್ತಡ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರ ಏರ್ಪಡಿಸಿದ್ದು, ದೂ.0821- 2548231 ಸಂಪರ್ಕಿಸಬಹುದು.
ಲಾರಿ ಮಾಲೀಕರ ಸಭೆ
ಕಳೆದ ಒಂದು ತಿಂಗಳಿಂದ ಮರಳು ಸಾಗಣೆ ಮಾಡುವ ರಹದಾರಿ ವಿತರಣೆ ಸ್ಥಗಿತಗೊಳಿಸಿರುವ ಬಗ್ಗೆ ಚರ್ಚಿಸಲು ದಿ ಮೈಸೂರು ಸಿಟಿ ಲೋಕಲ್ ಲಾರಿ ಓನರ್ಸ್ ಅಸೋಸಿಯೇಷನ್ನಿಂದ ಆ.19ರ ಬೆಳಗ್ಗೆ 11ಕ್ಕೆ ಸಂಘದ ಕಚೇರಿಯಲ್ಲಿ ಲಾರಿ ಮಾಲೀಕರ ಸಭೆ ಕರೆಯಲಾಗಿದೆ ಎಂದು ಕಾರ್ಯದರ್ಶಿ ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.
ದಸಂಸ ಪ್ರತಿಭಟನೆ
ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ಎಚ್.ಟಿ. ಚಂದ್ರಶೇಖರ್ ಅವರು ಭೂಮಾಫಿಯಾ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯು ಆ.19 ರಂದು ವಸ್ತುಪ್ರದರ್ಶನ ಪ್ರಾಧಿಕಾರದ ಮುಂಭಾಗ ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ತಿಳಿಸಿದ್ದಾರೆ.
ಯಕ್ಷಗಾನ
ರಂಗಾಯಣದ ರಂಗಶಾಲೆಯ ವಿದ್ಯಾರ್ಥಿಗಳಿಂದ ಆ.19ರ ಸಂಜೆ 7ಕ್ಕೆ ಯಕ್ಷಗಾನ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು, ಕೆರೆಮನೆ ಶಿವಾನಂದ ಹೆಗಡೆ ಅವರ ಮಾರ್ಗದರ್ಶನದಲ್ಲಿ ಅಭಿನಯಿಸಲಾಗುತ್ತಿದೆ. ಚಂದ್ರಶೇಖರ ನಾರಾಯಣ್ ವಂದಗದ್ದೆ ಮತ್ತು ಸಚಿನ್ ಭಂಡಾರಿ ನಾಜ್ಗಾರ್ ಅವರು ತರಬೇತಿ ನೀಡಿದ್ದಾರೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಮಕ್ಕಳಿಗೆ ಶೂ ವಿತರಣೆ
ಮ್ಯಾಜಿಕ್ಬಸ್ ಇಂಡಿಯಾ ಫೌಂಡೇಷನ್ನಿಂದ ಆ.19ರ ಬೆಳಗ್ಗೆ 10.30ಕ್ಕೆ ಗಾಂಧಿನಗರದ ಆದಿಜಾಂಬವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದುಳಿದ ಸಮುದಾಯಗಳ 15000 ಮಕ್ಕಳಿಗೆ ಶೂ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಡಿಡಿಪಿಐ ಬಿ.ಕೆ. ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

