ವಂಶಪಾರಂಪರಿಕ ವೈದ್ಯರಿಗೆ ಕಿರುಕುಳ ಬೇಡ
ಕ.ಪ್ರ.ವಾರ್ತೆ , ಮೈಸೂರು , ಆ. 19
ನ್ಯಾಯಾಲಯದ ತೀರ್ಪು ಬರುವವರೆಗೆ ವಂಶಪಾರಂಪರಿಕ ಮತ್ತು ಅನುಭವದ ಆಧಾರದ ಮೇಲೆ ವೈದ್ಯಕೀಯ ವೃತ್ತಿ ನಡೆಸುವವರಿಗೆ ಅನಗತ್ಯ ಕಿರುಕುಳ ನೀಡದಂತೆ ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘ ಮನವಿ ಮಾಡಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಮತ್ತು ನಿಯಮ 2009 ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ಆದರೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದಲ್ಲಿ ಶತಮಾನಗಳಿಂದಲೂ ಯಾವುದೇ ಪದವಿ ಇಲ್ಲದೆ, ವಂಶಪಾರಂಪರಿಕವಾಗಿ ಮತ್ತು ಕೆಲವು ಸಂಸ್ಥೆಗಳ ತರಬೇತಿ ಆಧಾರದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಸಾವಿರಾರು ವಿದ್ಯಾರ್ಹತೆ ರಹಿತ ವೈದ್ಯರು ಈ ಕಾಯಿದೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘದ ಪ್ರಧಾನ ಸಂಯೋಜಕ ಬಿ.ಎಸ್. ಚಂದ್ರು ತಿಳಿಸಿದರು.
ಸಂವಿಧಾನದ ವಿಧಿ 14, 19 ಮತ್ತು 21ರಂತೆ ವೃತ್ತಿ ಅವಲಂಬಿಸುವ ಮತ್ತು ಮುಂದುವರಿಸುವ, ರಕ್ಷಣೆ ಮತ್ತು ಗೌರವ ಕಾಪಾಡಿಕೊಳ್ಳುವ ಹಕ್ಕು ಭಾರತೀಯ ನಾಗರಿಕರಿಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದ್ದು, ಕಾಯಿದೆ ಜಾರಿಯಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎಂದರು.
ಸಂಘದ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಗೌರವ ಅಧ್ಯಕ್ಷರಾಗಿ ರಾಮಕೃಷ್ಣೇಗೌಡ, ಅಧ್ಯಕ್ಷ- ರವೀಶ್, ಹಿರಿಯ ಉಪಾಧ್ಯಕ್ಷ- ಅಮ್ಜದ್ ಬೇಗ್, ಉಪಾಧ್ಯಕ್ಷರಾಗಿ- ಆಯಿಷಾ ಸಿದ್ದಿಕಾ, ಬಾಬು, ಪ್ರಧಾನ ಕಾರ್ಯದರ್ಶಿ- ಎಂ.ಹರೀಶ್, ಕೋಶಾಧಿಕಾರಿ- ಮನ್ಸೂರ್ ಅಹ್ಮದ್ಖಾನ್, ಜಂಟಿ ಕಾರ್ಯದರ್ಶಿ- ಶ್ವೇತ, ಸಂಘಟನಾ ಕಾರ್ಯದರ್ಶಿ- ಸೋಮಶೇಖರ್, ಸದಸ್ಯರಾಗಿ ಎಸ್.ಎ. ದಾದಾಜಿ, ಸಮೀರ್ ವಿಶ್ವಾಸ್, ಕಮಲೇಶ್, ತಾಸೀನಾ, ಕವಿತಾ, ನಾಗರಾಜ್, ಕರಿಯಪ್ಪ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

