ಮೈಸೂರು

ಗಿರಿಜನ ಹಾಡಿಯಲ್ಲಿ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ

Published On :

ಕ.ಪ್ರ.ವಾರ್ತೆ ,  ಹುಣಸೂರು ,  ಆ. 19
ಸಮಾಜದ ಪ್ರತಿಯೊಂದೂ ಕೆಲಸ ಕಾರ್ಯಗಳಿಗೂ ಸರ್ಕಾರಗಳನ್ನೆ ಅವಲಂಬಿಸುವ ನಮ್ಮ ದೇಶದಲ್ಲಿ ಯುವ ಜನಾಂಗಕ್ಕೆ ಈ ವಿದೇಶಿ ತಂಡ ಆದರ್ಶವಾಗಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು. ತಾಲೂಕಿನ ಬಲ್ಲೇನಹಳ್ಳಿ ಗಿರಿಜನ ಹಾಡಿಯಲ್ಲಿ ಫ್ರಾನ್ಸ್ ದೇಶದ ಪ್ಯಾರೀಸ್‌ನ ಹೀಲಪ್ ಸ್ಟೂಡೆಂಟ್ ಅಸೋಸಿಯೇಷನ್ ಸಿವಿಲ್ ಎಂಜಿನಿಯರ್ ವಿಭಾಗದ 8 ವಿದ್ಯಾರ್ಥಿಗಳ ತಂಡ ಹಾಡಿಯ ರಾಮು- ಮಹದೇವಿ, ಶಿವರಾಜು- ಮಾಲಾ ದಂಪತಿಗೆ ಶ್ರಮದಾನ ಹಾಗೂ ತಮ್ಮದೆ ಉಳಿತಾಯದ ಹಣದಿಂದ 1.75 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸುವ ಸಾಮಾಜಿಕ ಸೇವೆಯನ್ನು ಯುವ ಪೀಳಿಗೆ ಮೈಗೂಡಿಸಿಕೊಂಡಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂಬುದನ್ನು ವಿದೇಶಿ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ ಎಂದರು. ಎಫ್‌ಎಸ್‌ಎಲ್ ಸಂಸ್ಥೆ ಮುಂದಿನ ದಿನಗಳಲ್ಲಿ ಇಂಥ ಯೋಜನೆಗಳನ್ನು ರೂಪಿಸಿದಾಗ ನನ್ನನ್ನು ಸಂಪರ್ಕಿಸಿದಲ್ಲಿ ಯೋಜನೆಗೆ ಮತ್ತಷ್ಟು ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್ ಮಾತನಾಡಿ, ವಿದೇಶಿ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯವಾದದು. ಸ್ಫೂರ್ತಿ ಸಂಸ್ಥೆಯ ಸುಧಾಮಣಿ ವಿದೇಶಿ ವಿದ್ಯಾರ್ಥಿಗಳು ಸೇವೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಹೇಳಿದರು.
ಎಫ್‌ಎಸ್‌ಎಲ್ ಸಂಸ್ಥೆಯ ಜಂಟಿ ನಿರ್ದೇಶಕ ದೊರೆಸ್ವಾಮಿ ಮಾತನಾಡಿ, ಪ್ರತಿ ವರ್ಷ ವಿವಿಧ ದೇಶಗಳಿಂದ 600 ರಿಂದ 700 ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ವಿವಿಧ ಮಾದರಿಯ ಯೋಜನೆಗಳನ್ನು ತಂದು ಸೇವೆಯ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಇವರಿಗೆ ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ, ಆಹಾರ ಪದ್ಧತಿಗಳ ಬಗ್ಗೆ ಒಂದು ವಾರ ತರಬೇತಿ ನೀಡಿದ ನಂತರ ಅವರ ಅಭಿರುಚಿಗೆ ತಕ್ಕಂತೆ ರಾಜ್ಯದೆಲ್ಲೆಡೆ ನಿಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಸಕರ ಸಹಕಾರ ಪಡೆದು ಇನ್ನಷ್ಟು ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ರೂಪಿಸಲಾಗುವುದು ಎಂದರು.
ಸ್ನೇಹ ಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಸಚಿನ್ ಪ್ರಕಾಶ್, ಕಾಂಗ್ರೆಸ್ ಅಧ್ಯಕ್ಷ ಬಿಳಿಕೆರೆ ಬಸವರಾಜು, ಮುಖಂಡರಾದ ಧರ್ಮಾಪುರ ರಮೇಶ್, ಕಲ್ಕುಣಿಕೆ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.