ಪಟ ಪಟ ಹಾರೋ ಗಾಳಿಪಟ...
ಕ.ಪ್ರ.ವಾರ್ತೆ , ಮೈಸೂರು , ಆ. 20
ಒಂದೆಡೆ ರಂಗು ರಂಗಿನ ಉಡುಗೆ ಧರಿಸಿದ್ದ ಚಿಣ್ಣರ ಸಂಭ್ರಮವಾದರೆ, ಮತ್ತೊಂದೆಡೆ ಬಾನಂಗಳದಲ್ಲಿ ನಕ್ಷತ್ರದಂತೆ ಚಿತ್ತಾರ ಮೂಡಿಸಿದ್ದ ಗಾಳಿಪಟಗಳ ಸಂಭ್ರಮ...
ಇದು ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಮಂಗಳವಾರ ಕಂಡುಬಂದ ವಿಹಂಗಮ ನೋಟ. ನಾಡಿನ ಸಂಸ್ಕೃತಿ ಹಾಗೂ ಕಲೆಯ ಭಾಗವಾದ ಗಾಳಿಪಟ ಹಬ್ಬವನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಗಾಳಿಪಟ ಉತ್ಸವ ಹೆಸರಿನಲ್ಲಿ ಆಯೋಜಿಸಲಾಗಿತ್ತು.
ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಮರೆಯಾಗುತ್ತಿರವ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವ ಕಲೆ ಮತ್ತು ಕ್ರೀಡೆಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಈ ಉತ್ಸವ ಹಾಗೂ ಸ್ಪರ್ಧೆಗೆ ಚೆನ್ನೈನ ಈಜಿ ವಿದ್ಯಾ ಪ್ರೈವೇಟ್ ಕಂಪನಿಯ ಹಿರಿಯ ಪ್ರಾದೇಶಿಕ ಮುಖ್ಯಸ್ಥೆ ಜಯಶ್ರೀ ಗಣೇಶನ್ ಗಾಳಿಪಟ ಹಾರಿಸುವ ಮೂಲಕ ಈ ಉತ್ಸವಕ್ಕೆ ಚಾಲನೆ ನೀಡಿದರು. ಅಲ್ಲದೆ, ಬಾಲ್ಯದಲ್ಲಿನ ತಮ್ಮ ಅನುಭವ ಹಂಚಿಕೊಂಡರು. ಗಾಳಿಪಟ ನಮ್ಮ ಜೀವನದಲ್ಲಿ ಸ್ಫೂರ್ತಿ ಚಿಲುಮೆಯನ್ನು ಹೊರ ಹೊಮ್ಮಿಸುತ್ತದೆ. ನಮ್ಮ ಜೀವನದ ಏಳುಬೀಳುಗಳನ್ನು ಸ್ವಸ್ಥ ಮನಸ್ಸಿನಿಂದ ಸ್ವೀಕರಿಸುವ ನೀತಿಯನ್ನು ಗಾಳಿಪಟ ಕಲಿಸುತ್ತದೆ ಎಂದರು.
ಶಾಲೆಯ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದರು. 8ನೇ ತರಗತಿಯ ವಿದ್ಯಾರ್ಥಿಗಳಾದ ದೈವಿಕ್ ಮತ್ತು ರಕ್ಷಿತ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ, 3ನೇ ತರಗತಿಯ ಎ. ಅದಿತಿ ಮತ್ತು ಮನಸ್ವಿ ವೈ. ಪಟೇಲ್ ತೃತೀಯ ಬಹುಮಾನ ಪಡೆದರು. 6ನೇ ತರಗತಿಯ ಎಂ.ಪಿ. ಶಿಶಿರ್ ಮತ್ತು 8ನೇ ತರಗತಿಯ ರೋಷನ್ ಸಮಾಧಾನಕರ ಬಹುಮಾನ ಪಡೆದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್. ರಘು, ಪ್ರಾಂಶುಪಾಲೆ ಎಲ್. ಸವಿತಾ, ವಿವಿಧ ವಿಭಾಗಗಳ ಮುಖ್ಯೋಪಾಧ್ಯಾಯರಾದ ರಾಧಿಕಾ, ನಿವೇದಿತ ನಾಗೇಶ್ ಮತ್ತು ಶಿಕ್ಷಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

