ಎಲ್ಲೈಸಿ ಅಧಿಕಾರಿಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ಹುಣಸೂರು ಆ. 22
ಸಹಾಯಕ ವ್ಯವಸ್ಥಾಪಕ ಶ್ರೀಕಾಂತ್ ತಮ್ಮ ಶಾಖೆಯಲ್ಲಿ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ, ಉತ್ತಮ ವ್ಯವಹಾರ ಮತ್ತು ವಹಿವಾಟು ನಡೆಸಿದ್ದರು ಎಂದು ಭಾರತೀಯ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕ ಸುರೇಂದ್ರ ರೈ ಪ್ರಶಂಸಿದರು.
ಇಲ್ಲಿನ ಭಾರತೀಯ ಜೀವ ವಿಮಾ ನಿಗಮ ಶಾಖೆಯ ಕಚೇರಿಯಲ್ಲಿ ನಡೆದ ಸಹಾಯಕ ವ್ಯವಸ್ಥಾಪಕ ಶ್ರೀಕಾಂತ್ ಅವರು ವರ್ಗಾವಣೆಯಾದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಮಾ ಸಂಸ್ಥೆಯಲ್ಲಿ ಅಧಿಕಾರಿಗಳು ಮತ್ತು ನೂರಾರು ಪ್ರತಿನಿಧಿಗಳ ಪ್ರೀತಿ, ವಿಶ್ವಾಸ ಗಳಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ವಿಮಾ ಕ್ಷೇತ್ರದಲ್ಲಿ ನಿತ್ಯ ಪೈಪೋಟಿ ನಡೆಯುತ್ತಿರುವ ದಿನದಲ್ಲಿ ಎಲ್ಲರಿಂದ ಹೂವಿನ ಸುರಿಮಳೆ ಗಮನಿಸಿ ಆಶ್ಚರ್ಯವಾಗಿದೆ ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹನಗೋಡು ನಟರಾಜು ಸಮಾರಂಭ ಉದ್ಘಾಟಿಸಿದರು. ಸನ್ಮಾನ ಸ್ವೀಕರಿಸಿದ ಸಹಾಯಕ ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ಮಾತನಾಡಿ, ಸೇವೆಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕೆಂದು ಕೆಲಸ ಮಾಡಿದ್ದೇನೆ. ಯಾವ ಅಧಿಕಾರಿ ಬಂದರೂ ಕೆಲಸ ಮಾಡಲೆಬೇಕು. ಹಾಗಾಗಿ ಯಾರು ಧೃತಿಗೇಡಬೇಡಿ. ವರ್ಗಾವಣೆ ವಿಚಾರದಲ್ಲಿ ನಿಗಮದ ನಿಯಮದಂತೆ ವರ್ಗಾವಣೆಯಾಗದೆ, ಸಮಸ್ಯೆಗಳಿದ್ದರೆ ಸಂಪರ್ಕಿಸಿ, ತಾವು ಬಂದು ಬಗೆಹರಿಸುವುದಾಗಿ ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ವಿ. ಜಯಣ್ಣ, ನೂತನ ಸಹಾಯಕ ಶಾಖಾ ವ್ಯವಸ್ಥಾಪಕ ಜೈಶಂಕರ್, ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್, ಅರುಣಚಲಂ, ವಾಸು, ಇಂದ್ರೇಶ್ ಮಾತನಾಡಿದರು. ಎಲ್ಐಸಿ ಪ್ರತಿನಿಧಿಗಳಾದ ಎನ್.ಎಸ್. ಚಂದ್ರಪ್ಪ, ಕೆ. ಗಣಪತಿ, ಮುಕುಂದ, ಶ್ರೀಕಂಠರಾಜೇ ಅರಸ್, ಪ್ರಕಾಶ್, ರಮೇಶ್ ಬಾಬು, ಸೇರಿದಂತೆ ನೂರಾರು ಪ್ರತಿನಿಧಿಗಳು ಭಾಗವಹಿಸಿ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು. ನೌಕರರು, ಪ್ರತಿನಿಧಿ ಬಳಗ ಭಾಗವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ವಿ. ಜಯಣ್ಣ ನಿರೂಪಿಸಿದರು. ಎಲ್ಐಸಿ ಪ್ರತಿನಿಧಿ ನಾರಾಯಣ ಸ್ವಾಗತಿಸಿದರು. ಸ್ವಾಮಿ ವಂದಿಸಿದರು.
ಕಾಂಗ್ರೆಸ್ಗೆ ಗೆಲವು: ರವಿಮಾನು ವಿಶ್ವಾಸ
ಕ.ಪ್ರ.ವಾರ್ತೆ ಬೈಲುಕುಪ್ಪೆ ಆ. 22
ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಆರ್. ಧರ್ಮಸೇನ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ಗ್ರಾಪಂ ಅಧ್ಯಕ್ಷ ರವಿಮಾನು ಹೇಳಿದರು. ಇಲ್ಲಿನ ಗ್ರಾಪಂ ಆವರಣದಲ್ಲಿ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಮತದಾನ ಮಾಡಿ ಮಾತನಾಡಿ, ನಮ್ಮ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ 13 ಹಳ್ಳಿಗಳಿಂದ ಒಟ್ಟು 22 ಜನ ಸದಸ್ಯರಿದ್ದು, ಮೈಸೂರು ಹಾಗೂ ಚಾಮರಾಜನಗರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಆರ್. ಧರ್ಮಸೇನ ಅವರಿಗೆ ಹೆಚ್ಚಿನ ಬಹುಮತ ನಮ್ಮ ಪಂಚಾಯಿತಿಯಲ್ಲಿ ಲಭಿಸಲಿವೆ ಎಂದು ತಿಳಿಸಿದರು. ತಾಪಂ ಸದಸ್ಯ ನವಿಲೂರು ಮಹದೇವ, ಗ್ರಾಪಂ ಉಪಾಧ್ಯಕ್ಷೆ ಮಂಜುಳಮ್ಮ, ಗ್ರಾಪಂ ಸದಸ್ಯರಾದ ರಾಜು, ಮಹದೇವ, ಮಂಜುಳ, ಸರಸ್ವತಿ, ರವಿ, ರಾಜು, ಕಮಲ ಸ್ವಾಮಿ, ಗಣೇಶ, ಸುನಿತ ಮೋಹನ್, ಖತೀಜ, ಗ್ರಾಪಂ ಮಾಜಿ ಸದಸ್ಯ ರಾಮಣ್ಣ, ಗ್ರಾಮದ ಮುಖಂಡರಾದ ಗಣೇಶ, ರಾಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

