ಸರ ಅಪಹರಣಕಾರನ ಬಂಧನ
ಮೈಸೂರು: ಮೈಸೂರು ನಗರ ಸಿಸಿಬಿ ಘಟಕದ ಪೊಲೀಸರು ಸರ ಅಪಹರಣಕಾರರನ್ನು ಬಂಧಿಸಿ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಶ್ರೀರಾಂಪುರ ನಿವಾಸಿ ಮಂಜುನಾಥ ಬಂಧಿತ ಆರೋಪಿ. ಈತನನ್ನು ಜೆ.ಪಿ. ನಗರದಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ತನ್ನ ಸಹಚರರೊಂದಿಗೆ ಸೇರಿ ಸರ ಅಪಹರಣ ಮಾಡಿರುವುದು ಒಪ್ಪಿಕೊಂಡಿದ್ದು, 2 ಪ್ರಕರಣದ 52 ಗ್ರಾಂ. ಚಿನ್ನಾಭರಣ, ಕಳವು ಮಾಡಿದ 2 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ 4 ಪ್ರಕರಣಗಳು ಪತ್ತೆಯಾಗಿದೆ. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಂ.ಎಂ. ಮಹದೇವಯ್ಯ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಎಚ್.ಟಿ. ಸುನೀಲ್ಕುಮಾರ್, ಎಸ್ಐ ಶ್ರೀನಿವಾಸಗೌಡ, ಎಎಸ್ಐಗಳಾದ ಎಂ.ಡಿ. ಶಿವರಾಜು, ಎಂ.ಜೆ. ಜಯಶೀಲನ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಅವಕಾಶವಾದಿ: ಟೀಕೆ
ಮೈಸೂರು: ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಸಮಯಸಾಧಕ ರಾಜಕಾರಣ ಮಾಡುತ್ತಿವೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಟೀಕಿಸಿದರು. ಮೈಸೂರು ನಗರಪಾಲಿಕೆ ಕಚೇರಿಯಲ್ಲಿ ಗುರುವಾರ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಏಕಾಂಗಿ ಪ್ರತಿಭಟನೆ
ಮೈಸೂರು: ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ಸಮಿತಿಯ ಕಾರ್ಯಕರ್ತ ಜಿ. ನಾಗೇಂದ್ರ ಶರ್ಮಾ ಅವರು ಆ. 23ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವೆರೆಗ ನಗರದ ಗಾಂಧಿ ಚೌಕದ ಬಳಿ ಏಕಾಂಗಿಯಾಗಿ ಪ್ರತಿಭಟಿಸಲಿದ್ದಾರೆ.
ವಾದ್ಯಗೋಷ್ಠಿ ತಂಡ ಉದ್ಘಾಟನೆ
ಮೈಸೂರು: ಮಹತೀ ವಾದ್ಯಗೋಷ್ಠಿ ಉದ್ಘಾಟನಾ ಸಮಾರಂಭವು ಆ. 24ರ ಸಂಜೆ 4.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆಯಲಿದ್ದು, ರಂಗಕರ್ಮಿ ಶ್ರೀಕಂಠ ಗುಂಡಪ್ಪ ಉದ್ಘಾಟಿಸುವರು. ಐಎಂಎ ಜಿಲ್ಲಾಧ್ಯಕ್ಷ ಡಾ.ಸಿ. ಶರತ್ಕುಮಾರ್, ಡಾ. ಜಮುನಾ ರಾಣಿ ಭಾಗವಹಿಸುವರು.
ಆರ್.ಎಸ್. ನಾಯ್ಡು ಜಯಂತಿ
ಮೈಸೂರು: ಸ್ವಾತಂತ್ರ್ಯ ಹೋರಾಟಗಾರ ದಿ. ಆರ್.ಎಸ್. ನಾಯ್ಡು ಅವರ 108ನೇ ಜನ್ಮದಿನಾಚರಣೆಯನ್ನು ಆ. 24ರ ಸಂಜೆ 4.30ಕ್ಕೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದು, ಎ.ವಿ. ನರಸಿಂಹಮೂರ್ತಿ ಭಾಗವಹಿಸುವರು.
ವಾಲಿಬಾಲ್ ಪಂದ್ಯಾವಳಿ
ಮೈಸೂರು: ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆ. 24ರ ಬೆಳಗ್ಗೆ 9.30ಕ್ಕೆ ಡಾ. ರಾಜೇಂದ್ರ ಸ್ವಾಮಿಗಳ ಸ್ಮರಣಾರ್ಥ ಅಂತರ ಕಾಲೇಜು ಪುರುಷರ ವಾಲಿಬಾಲ್ ಮತ್ತು ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿ ಏರ್ಪಡಿಸಿದ್ದು, ಮೈವಿವಿ ಕುಲಸಚಿವ ಪ್ರೊ. ಸಿ. ಬಸವರಾಜು ಉದ್ಘಾಟಿಸುವರು.
25ರಂದು ಹೂ ಗಿಡ ವಿತರಣೆ
ಮೈಸೂರು: ಎನ್ಐಇ ಪರಿಸರ ಅಭಿವೃದ್ಧಿ ಕೇಂದ್ರ ಮತ್ತು ಶಕುಂತಲಾರಾವ್ ಸ್ಮಾರಕ ಕೃಷಿ ಉತ್ಥಾನ ಪ್ರತಿಷ್ಠಾನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆ. 25ರ ಬೆಳಗ್ಗೆ 11ಕ್ಕೆ ಸಂಸ್ಥೆಯ ಸುವರ್ಣ ಮಹೋತ್ಸವ ಸಂಕೀರ್ಣಲ್ಲಿ 3000 ಅಲಂಕಾರಿಕ ಹೂ ಗಿಡಗಳ ವಿತರಣೆ ಕಾರ್ಯಕ್ರಮ ಏರ್ಪಡಿಸಿದ್ದು, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ನಿಯೋಜಕ ಡಾ. ಅರುಣ್ ಬಾಳಾಮಟ್ಟಿ ಉದ್ಘಾಟಿಸುವರು.
ಇಂದಿನಿಂದ ಕ್ರೀಡಾಕೂಟ
ಕೆ.ಆರ್. ನಗರ: ಹೊಸ ಅಗ್ರಹಾರ ಸಾರ್ವಜನಿಕ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಖಾಸಗಿ ಪದವಿಪೂರ್ವ ಕಾಲೇಜು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆ. 23 ಮತ್ತು 24 ರಂದು ಇಲ್ಲಿನ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ನಡೆಯಲಿದೆ. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಕ್ರೀಡಾ ಜ್ಯೋತಿ ಬೆಳಗಿಸಲಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಎಂ. ಪುಟ್ಟು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಬಿ.ಎನ್. ವೀಣಾ, ಬಿಇಒ ಜವರೇಗೌಡ, ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

