ಮೈಸೂರು

ರೋಗಿ ಅಸ್ವಸ್ಥ- ವೈದ್ಯ ವಿರುದ್ಧ ನಿರ್ಲಕ್ಷ್ಯ ದೂರು

Published On :

ಮೈಸೂರು: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆ ದಾಖಲಾಗಿರುವ ಘಟನೆ ಗುರುವಾರ ನಡೆದಿದೆ. ಎಚ್.ಡಿ. ಕೋಟೆ ತಾಲೂಕು ಶಿಂಧೆನಹಳ್ಳಿ ನಿವಾಸಿ ಸ್ವಾಮಿಗೌಡ (28) ಎಂಬವರ ವೈದ್ಯರ ನಿರ್ಲಕ್ಷ್ಯದಿಂದ ಅಸ್ವಸ್ಥಗೊಂಡವರು. ಇವರು ಮೈಸೂರು ತಾಲೂಕು ಮಾರ್ಬಳ್ಳಿಯಲ್ಲಿರುವ ಪತ್ನಿ ಮನೆಗೆ ಬಂದಿದ್ದರು. ಜ್ವರದಿಂದಾಗಿ ಮಾರ್ಬಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಮೈಸೂರಿನ ಯರಗನಹಳ್ಳಿ ನಿವಾಸಿ ಡಾ. ಗೋವಿಂದಪ್ಪ ಅವರ ಬಳಿಗೆ ಚಿಕಿತ್ಸೆಗಾಗಿ ಹೋಗಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಸ್ವಾಮಿಗೌಡ ಅವರು ತೀವ್ರವಾಗಿ ಅಸ್ವಸ್ಥಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಸಂಬಂಧ ಸ್ವಾಮಿಗೌಡ ಕುಟುಂಬದವರು ನೀಡಿರುವ ದೂರಿನ ಹಿನ್ನೆಯಲ್ಲಿ ಜಯಪುರ ಠಾಣೆ ಎಸ್‌ಐ ನಂಜಪ್ಪ ಮತ್ತು ಸಿಬ್ಬಂದಿ ವೈದ್ಯರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅನಧಿಕೃತವಾಗಿ ಸಂಗ್ರಹಿಸಿದ್ದ ತಂಬಾಕು ಜಪ್ತಿ
ಮೈಸೂರು:
ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ 2.50 ಲಕ್ಷ ಮೌಲ್ಯದ 2118 ಕೆಜಿ ತಂಬಾಕನ್ನು ಬುಧವಾರ ಜಪ್ತಿ ಮಾಡಲಾಗಿದೆ ಎಂದು ಮೈಸೂರು ತಂಬಾಕು ಮಂಡಳಿ ಪ್ರಾಂತೀಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಎಮ್ಮೆಕೊಪ್ಪಲು ಗ್ರಾಮದಲ್ಲಿ ಅನಧಿಕೃತವಾಗಿ ತಂಬಾಕು ಖರೀದಿಸಿ ಸಂಗ್ರಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಗುಂಟೂರು ಕೇಂದ್ರ ಜಾಗೃತದಳ ಮತ್ತು ಮೈಸೂರು ಪ್ರಾಂತೀಯ ಜಾಗೃತ ದಳದವರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.ಜಪ್ತಿ ಮಾಡ ಲಾಗಿರುವ ತಂಬಾಕನ್ನು ಕಟ್ಟೆಮಳಲವಾಡಿ ಹರಾಜು ಮಾರುಕಟ್ಟೆ-3ರ ಉಗ್ರಾಣದಲ್ಲಿ ಇರಿಸಲಾಗಿದೆ. ಕೇಂದ್ರ ಜಾಗೃತ ದಳದ ಪಿ. ರಮೇಶ್, ಕರ್ನಾಟಕ ಜಾಗೃತ ದಳದ ಎಚ್.ಕೆ. ಮಹದೇವಯ್ಯ ಮತ್ತು ಸಿಬ್ಬಂದಿ ಹರಾಜು ಮಾರುಕಟ್ಟೆ 3ರ ಕ್ಷೇತ್ರ ಸಹಾಯಕ ದೇವರಾಜ ಸಹಾಯದಿಂದ ಈ ದಾಳಿ ನಡೆಸಿದ್ದಾರೆ. ಅನಧಿಕೃತವಾಗಿ ತಂಬಾಕು ಖರೀದಿಸುವುದು ಮತ್ತು ಮಾರುವುದು ತಂಬಾಕು ಮಂಡಳಿಯ ನಿಯಮ ಪ್ರಕಾರ ಅಪರಾಧವಾಗಿರುತ್ತದೆ. ಈ ಕಾರ್ಯದಲ್ಲಿ ತೊಡಗಿರುವುದು ಸಾಬೀತಾದಲ್ಲಿ ಕಾನೂನು ಕ್ರಮ ಜರುಗಿಸಬಹುದು. ಅಧಿಕೃತ ರೈತರು ಈ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಲ್ಲಿ ಜೈಲು ವಾಸದ ಜೊತೆಗೆ ತಂಬಾಕು ಬೆಳೆಯುವ ಲೈಸೆನ್ಸ್ ರದ್ದುಗೊಳಿಸಬಹುದು ಎಂದು ಪ್ರಾಂತೀಯ ವ್ಯವಸ್ಥಾಪಕ ನರಸಿಂಹಯ್ಯ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.