ವಿಶ್ವಶಾಂತಿಗಾಗಿ ಅಹಿಂಸಾ ರ್ಯಾಲಿ
ಕ.ಪ್ರ.ವಾರ್ತೆ , ಮೈಸೂರು , ಆ. 25
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧ ಜೈನ ಸಮಾಜ ಸಂಘಟನೆಯವರು ಇದೇ ಮೊದಲ ಬಾರಿಗೆ ವಿಶ್ವಶಾಂತಿಗಾಗಿ ಅಹಿಂಸಾ ರ್ಯಾಲಿಯನ್ನು ಭಾನುವಾರ ಆಯೋಜಿಸಿದ್ದರು.
ಸುಮತಿನಾಥ ಜೈನ್ ಶ್ವೆತಾಂಬರ ಮೂರ್ತಿಪೂಜಕ ಸಂಘ, ಸುಮತಿನಾಥ ಜೈನ್ ನವಯುವಕ ಮಂಡಳಿ ನೇತೃತ್ವದಲ್ಲಿ ಈ ರ್ಯಾಲಿ ನಡೆಯಿತು. ಸಂಗಮ್ ಚಿತ್ರಮಂದಿರ ಬಳಿಯ ತೀರ್ಥಂಕರ ರಸ್ತೆಯಲ್ಲಿರುವ ಸುಮತಿನಾಥ ಜೈನ್ ದೇವಸ್ಥಾನದ ಬಳಿ ಈ ರ್ಯಾಲಿಗೆ ಸುಮತಿನಾಥ ಜೈನ್ ಶ್ವೆತಾಂಬರ ಮೂರ್ತಿಪೂಜಕ ಸಂಘದ ಅಧ್ಯಕ್ಷ ಜೀವಂತ್ರಾಜ್ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಸುಮತಿನಾಥ್ ದೇವಸ್ಥಾನ ತೀರ್ಥಂಕರ ರಸ್ತೆಯಿಂದ ಹೊರಟ ರ್ಯಾಲಿಯು ಮಹಾವೀರ್ ವೃತ್ತ, ಗಾಂಧಿ ಚೌಕ, ಚಿಕ್ಕಗಡಿಯಾರ, ಡಿ. ದೇವರಾಜ ಅರಸು ರಸ್ತೆ, ದಿವಾನ್ಸ್ ರಸ್ತೆ, ಜೆ.ಕೆ. ಮೈದಾನ, ಇರ್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆ, ಚಂದ್ರಗುಪ್ತ ರಸ್ತೆ ಮಾರ್ಗವಾಗಿ ಮಹಾವೀರ ಭವನಕ್ಕೆ ತಲುಪಿತು.
ಜೈನ ಸಮುದಾಯಕ್ಕೆ ಸೇರಿದ 25 ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದವು. ಅಹಿಂಸೆ, ವಿಶ್ವಶಾಂತಿ, ಗೋಮಾತೆ, ಪರಿಸರ, ನಾರಿ, ನೀರು, ಜಾತ್ಯತೀತ ಭಾವನೆ ಮುಂತಾದ ಅಂಶಗಳು ಹಾಗೂ ಇವುಗಳ ಮಹತ್ವ ಪ್ರದರ್ಶಿಸುವ ಸ್ತಬ್ಧಚಿತ್ರಗಳು ಇದ್ದವು. ಜೊತೆಗೆ ಮೈನಾ ಸುಂದರಿ, ಸೀತಾ, ಚಂದನಬಾಲಾ, ಸುಲಸಾ, ಮಹಾರಾಜ ಸಂಪ್ರತಿ, ಕುಮಾರ್ಪಾಲ್ ಮಹಾರಾಜ, ಅನುಪಮಾದೇವಿ, ಮಂತ್ರೀಶ್ವರ ವಿಮಲ್, ವಿಜಯ್ ಸೇಠ್, ವಿಜಯ್ ಸೇಠಾನಿ ಮೊದಲಾದ ಮಹಾಪುರುಷರ ಜೀವನಚರಿತ್ರೆ ಪ್ರದರ್ಶಿಸುವ 25 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಅಲ್ಲದೆ, ಆಕರ್ಷಕ ಭಿತ್ತಿಪತ್ರ, ವಿವಿಧ ವೇಷಧಾರಿಗಳು, ಸಾಂದರ್ಭಿಕ ಪ್ರಸ್ತುತಿ, ಬ್ಯಾಂಡ್ಸೆಟ್, ರಥಗಳು, ಅಲಂಕೃತ ವಾಹನಗಳು, ಜನಪದ ಕಲಾತಂಡಗಳಿಂದ ಕಲಾ ಪ್ರಸ್ತುತಿ ಸಹ ಇತ್ತು.
ವಿಶ್ವಶಾಂತಿಗಾಗಿ ಮಂತ್ರೇಶ್ವರ ಪಾರ್ಶ್ವನಾಥ್ ಮಹಾ ವಿಧಾನ ತಪಾರಾಧನೆ ಅನುಷ್ಠಾನದಲ್ಲಿ ಭಾಗವಹಿಸಿದ್ದ 330 ಮಂದಿ ಮಹಿಳೆಯರು, ಪುರುಷರು, ಯುವಕರು ಸೇರಿ 36 ದಿನ ಉಪವಾಸ, ಜಪ- ತಪಸು ಮಾಡಿ ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ಮಹಾ ಅನುಷ್ಠಾನ ಪೂರ್ಣಾಹುತಿ ಅಂಗವಾಗಿ ಈ ಅಹಿಂಸಾ ರ್ಯಾಲಿ ಆಯೋಜಿಸಲಾಗಿತ್ತು.
ಜೈನಾಚಾರ್ಯರಾದ ವಿಜಯ ಅಭಯಸೇನ ಸೂರೀಜಿ ಮಹಾರಾಜ್, ಮುನಿಶ್ರೀ ದೀಪ್ಸೇನ್ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಶಾಸಕ ವಾಸು, ಬಿಜೆಪಿ ಮಾಜಿ ನಗರಾಧ್ಯಕ್ಷ ಎಂ. ಶಿವಕುಮಾರ್, ಕಾಂಗ್ರೆಸ್ ಮುಖಂಡ ಎಂ. ಶಿವಣ್ಣ, ಸಂಘದ ಉಪಾಧ್ಯಕ್ಷ ಟಿಕಮ್ಚಂದ್, ಕಾರ್ಯದರ್ಶಿಅಶೋಕ್ಕುಮಾರ್ ಜೈನ್, ಧರ್ಮದರ್ಶಿಗಳಾದ ಹನ್ಸ್ರಾಜ್ ಪಗಾರಿಯಾ, ಹೀರಾಚಂದ್ ಕಾಂಗಟಾನಿ, ಭೇರುಲಾಲ್ ರಾಥೋಡ್, ಬಾನ್ಲ್ಜೀ, ತಾರಾಚಂದ್, ಜುಗರಾಜ್, ಮಾಂಗೀಲಾಲ್ ಪಾರಾಸ್ಮಲ್, ನಾಗರಾಜ್ ಜೈನ್, ಡಯಾಲ್, ಮಂಗಲ್ಚಂದ್ ಜೋತಾ, ರಥನ್ಚಂದ್, ಸುರೇಶ್ ಜೈನ್, ಕಾಂತಿಲಾಲ್ ಜೈನ್, ಮಾಂಗೀಲಾಲ್ ಪೋರ್ವಾಲ್, ಚಂಪಾಲಾಲ್, ಬಾಬುಲಾಲ್, ಮುಣೋತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

