ಮೈಸೂರು

ಸಿಲ್ಕ್ ಇಂಡಿಯಾ ರೇಷ್ಮೆ ಸೀರೆಗಳ ಮಾರಾಟ ಮೇಳಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ ಮೈಸೂರು ಆ. 29
ಗೌರಿ, ಗಣೇಶ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ವಿವಿಧ ರಾಜ್ಯಗಳ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವು ರಿಗಾಲಿಸ್ ಹೊಟೇಲ್‌ನಲ್ಲಿ ಗುರುವಾರ ಆರಂಭವಾಯಿತು.
ಭಾರತ ಸರ್ಕಾರದ ಜವಳಿ ಮಂತ್ರಾಲಯದಲ್ಲಿ ನೋಂದಾಯಿಸಿರುವ ಅಭಿವೃದ್ಧಿ ಸಂಸ್ಥೆಯು ಆಯೋಜಿಸಿರುವ ಈ ಮಾರಾಟ ಮೇಳವನ್ನು ಶಾಸಕ ಎಂ.ಕೆ. ಸೋಮಶೇಖರ್ ಉದ್ಘಾಟಿಸಿದರು.
ಮೈಸೂರು ಬಣ್ಣ ಮತ್ತು ಅರಗು ಕಂಪನಿಯ ಮಾಜಿ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕಾಂಗ್ರೆಸ್ ಮುಖಂಡ ಶಾರದಾ ಸಂಪತ್, ನಗರ ಪಾಲಿಕೆ ಸದಸ್ಯೆ ಮಹದೇವಮ್ಮ, ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸೀತಾರಾಮ್ ರೈ, ಸಂಯೋಜಕರಾದ ಅಭಿನಂದನ್, ರಾಕೇಶ್ ರೈ ಇದ್ದರು.
ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕಂಚಿ ಸಿಲ್ಕ್ ಮತ್ತು ಮದುವೆ ಸೀರೆಗಳು, ಡಿಸೈನರಿ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಂಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರಿ ಡ್ರೆಸ್ ಮಟಿರಿಯಲ್ ಮತ್ತು ಸೀರೆಗಳು ಬಾಗಲ್‌ಪುರ್ ರೇಷ್ಮೆ ಸೀರೆಗಳು, ಮುಲ್‌ಬಾರಿ, ಮೈಸೂರ್, ಕೋಲ್ಕತ್ತಾ, ಬನಾರಸ್ ಜಮ್‌ದಾನಿ ಮುಂತಾದ ಭಾರತದ 21 ರಾಜ್ಯಗಳ ವೈವಿಧ್ಯಮಯ ರೇಷ್ಮೆ ಸೀರೆಗಳು ಇಲ್ಲಿ ಲಭ್ಯವಿದೆ. ರೇಷ್ಮೆ ಸೀರೆಗಳ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಕಾರರು ಮತ್ತು ರೇಷ್ಮೆ ಸಹಕಾರ ಸಂಘಗಳ 40 ಕ್ಕೂ ಹೆಚ್ಚಿನ ಮಳಿಗೆಯನ್ನು ತೆರೆಯಲಾಗಿದೆ. ಸೆ. 3 ರವರೆಗ ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.