ಕೊನೆಗೂ ಬೋನಿಗೆ ಬಿದ್ದ ಚಿರತೆ
ಹುಣಸೂರು: ತಾಲೂಕಿನ ಹಬ್ಬನಕುಪ್ಪೆಯಲ್ಲಿ ಎರಡು ಕರುಗಳನ್ನು ಬಲಿ ತೆಗೆದುಕೊಂಡಿದ್ದ ಸುಮಾರು 5 ವರ್ಷದ ಗಂಡು ಚಿರತೆಯು ಆನೆ ಚೌಕೂರು ವಲಯದ ಪಿರಿಯಾಪಟ್ಟಣ ಮೀಸಲು ಅರಣ್ಯ ಪ್ರದೇಶದಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಸೆರೆಸಿಕ್ಕ ಚಿರತೆಯನ್ನು ಗುರುವಾರ ಮಧ್ಯರಾತ್ರಿ 12.30ರ ವೇಳೆಗೆ ಸಿಪಿಟಿ 6ರ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತೆಂದು ಪ್ರಾದೇಶಿಕ ಅರಣ್ಯ ವಲಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಚಾಲಕನಿಗೆ ಗಾಯ: ಬೋನ್ ಅನ್ನು ವಾಹನಕ್ಕೆ ಏರಿಸುವ ವೇಳೆ ಜೀಪಿನ ಚಾಲಕ ರಾಮುವಿಗೆ ಚಿರತೆಯು ಬೋನಿಂದಲೆ ಹೊರಕ್ಕೆ ಕಾಲು ಚಾಚಿ ಪಂಜರದಿಂದ ಕೈಬೆರಳಿಗೆ ಗಾಯಗೊಳಿಸಿದೆ. ಬೋನಿನಲ್ಲಿದ್ದ ವೇಳೆ ಚೆಲ್ಲಾಟವಾಡಲು ಹೋದ ಹಬ್ಬನಕುಪ್ಪೆಯ ವ್ಯಕ್ತಿಯೋರ್ವನಿಗೂ ಸಹ ಚಿರತೆ ಪೆಟ್ಟು ನೀಡಿದೆ.
ಇಬ್ಬರಿಗೂ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ಬಾಲರಾಜ್, ಪುಟ್ಟಸ್ವಾಮಿ, ಮಂಜು, ಸುಂದರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

