ಜಿಲ್ಲೆಯ ರೈತರಿಗೆ ಸಲಹೆ
ಮೈಸೂರು: ಬತ್ತದ ಕಟಾವಿನ ನಂತರ ಗದ್ದೆಯಲ್ಲಿನ ತೇವಾಂಶದ ಲಾಭವನ್ನು ರೈತರು ಪಡೆದುಕೊಳ್ಳುವಂತೆ ನಾಗನಹಳ್ಳಿಯ ಸಮಗ್ರ ಕೃಷಿ ಹವಾಮಾನ ವಿಭಾಗ ತಿಳಿಸಿದೆ. ಫೆ.5 ರವರೆಗೆ ಜಿಲ್ಲೆಯಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ರೈತರು ಬತ್ತದ ಕಟಾವು ಮುಗಿದ ಬಳಿಕ ದ್ವಿದಳ ಧಾನ್ಯಗಳಾದ ಹೆಸರು, ಅಲಸಂದೆ, ಉದ್ದು ಬೆಳೆಯಬಹುದು. ಬಿತ್ತನೆ ಬೀಜದ ಸಂಗ್ರಹ ಮಾಡಬೇಕು. ಬಿತ್ತನೆ ವೇಳೆ ಒಂದು ಎಕರೆಗೆ ಬೇಕಾಗುವ ಬೀಜಕ್ಕೆ 150 ಗ್ರಾಂ. ರೈಜೋಬಿಯಮ್ ಅಣುಜೀವಿ ಲೇಪನ ಮಾಡಿ, ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಅಥವಾ ಸೆಣಬನ್ನು ಹಸುಗಳ ಮೇವಿಗೆ ಬೆಳೆಯಬಹುದು. ಇದಕ್ಕೆ ಎಕರೆಗೆ 20 ಕೆ.ಜಿ. ಬೀಜ ಉಪಯೋಗಿಸಬೇಕು. ತೇವಾಂಶ ಇಲ್ಲದ ಗದ್ದೆಯಲ್ಲಿ ಮಾಗಿ ಉಳುಮೆ ಮಾಡುವುದರಿಂದ ಮುಂದಿನ ಬೆಳೆಗೆ ರೋಗ ಹಾಗೂ ಕೀಟಗಳ ಬಾಧೆ ಕಡಿಮೆ ಆಗುತ್ತದೆ. ಹೆಚ್ಚಿನ ಮಾಹಿತಿಗೆ ಸಹ ಸಂಶೋಧಕ ಎನ್.ನರೇಂದ್ರಬಾಬು ಅವರ ಮೊ. 8095227713 ಸಂಪರ್ಕಿಸಿ ಎಂದು ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

