ಮೈಸೂರು

ವಿವೇಕಾನಂದರ 151ನೇ ಜನ್ಮದಿನ

Published On :

ಮೈಸೂರು: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 151ನೇ ಜನ್ಮದಿನೋತ್ಸವವು ನಗರದ ಯಾದವಗಿರಿಯಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಅವರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಘೋಷ ಹಾಗೂ ಆರತಿಯೊಂದಿಗೆ ಬೆಳಗ್ಗೆ ಆರಂಭಗೊಂಡ ಈ ಉತ್ಸವದಲ್ಲಿ ವಿಶೇಷ, ಪೂಜೆ, ಶಿವ ಸಹಸ್ರನಾಮ ಪಾರಾಯಣ, ಭಜನೆ, ಗ್ರಂಥವಾಚನ ಹಾಗೂ ಹೋಮ ಏರ್ಪಡಿಸಲಾಗಿತ್ತು. ನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ದಿವ್ಯ ಜೀವನ ಹಾಗೂ ಭವ್ಯ ಸಂದೇಶಗಳನ್ನು ಸಾರುವ ನವಯುಗಾಚಾರ್ಯ ಸ್ವಾಮಿ ವಿವೇಕಾನಂದ ಎಂಬ ಮನೋಜ್ಞವಾದ ರೂಪಕವನ್ನು ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿಗಳು ಸಾದರಪಡಿಸಿದರು. ಸ್ವಾಮಿ ವಿವೇಕಾನಂದರ ಕುರಿತು ಪ್ರವಚನ ನಡೆಯಿತು. ಈ ಸಂದರ್ಭದಲ್ಲಿ ಅವರ ಜೀವನ ಮತ್ತು ಸಾಧನೆ ಕುರಿತಾಗಿ ಚಿತ್ರ ಪ್ರದರ್ಶಿಸಲಾಯಿತು. ವಿವೇಕಾನಂದರು ಮೆಚ್ಚಿದ, ಅವರೇ ಹಾಡಿದ ಹಾಗೂ ಅವರಿಂದ ರಚಿತವಾದ ಹಾಗೂ ಅವರನ್ನು ಕುರಿತಾದ ಗೀತೆಗಳನ್ನು ಗಾಯಕ ಪ್ರವೀಣ್ ಡಿ. ರಾವ್ ನಡೆಸಿ ಕೊಡುವ ಮೂಲಕ ಸಂಗೀತ ನಮನ ಸಲ್ಲಿಸಿದರು. ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಂತರು ಸೇರಿದಂತೆ ಅಪಾರ ಭಕ್ತ ವೃಂದ ನೆರೆದಿತ್ತು. ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.