ಆರೋಗ್ಯಕ್ಕೆ ಸಂಗೀತ ವರದಾನ: ಶಂಕರರಾವ್
ಮೈಸೂರು: ಆರೋಗ್ಯ ವರ್ಧನೆಗೆ ಸಂಗೀತ ವರದಾನ ಎಂದು ಹಿರಿಯ ಸಂಗೀತ ವಿದ್ವಾಂಸ ಹಾಗೂ ವೇಣುಗಾನ ವಿಶಾರದ ಬಿ. ಶಂಕರರಾವ್ ಅಭಿಪ್ರಾಯಪಟ್ಟರು.
ಮುಲಕನಾಡು ಸಭಾ ಚಾರಿಟಲ್ ಟ್ರಸ್ಟ್ ಸಂತಶ್ರೀ ತ್ಯಾಗರಾಜ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಗೀತವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಹವ್ಯಾಸ. 92ರ ಈ ವಯೋವಾನದಲ್ಲಿಯೂ ನಾನು ಇಷ್ಟೊಂದು ಉತ್ಸಾಹದಿಂದ ಇರಲು ಕಾರಣ ಸಂಗೀತ ಅಭ್ಯಾಸ. ಬೆಂಗಳೂರಿನಲ್ಲಿ ಪ್ರಪಂಚ ಎಂಬ ಸಂಗೀತ ಶಾಲೆ ತೆರೆದಿದ್ದೇನೆ. ಮಕ್ಕಳಾದಿಯಾಗಿ ವಯೋವೃದ್ಧರು ಸಹ ಸಂಗೀತ ಕಲಿಸಯುತ್ತಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರೊ.ಕೆ.ಜಿ. ಸತ್ಯನಾರಾಯಣ ಮಾತನಾಡಿ, ಸಂಗೀತ ನೋವು ನಿವಾರಿಸಿ ಮನಸ್ಸಿಗೆ ಸಂತಸ ನೀಡುವ ಸಾಧನ. ಇದಕ್ಕೆ ಯಾವುದೇ ಭಾಷೆ, ಜಾತಿ, ಧರ್ಮ ಹಾಗೂ ಮೇಲು ಕೀಳೆಂಬ ಭೇದಭಾವವಿಲ್ಲ. ಸಮಾಜವನ್ನು ಒಂದುಗೂಡಿಸುವಲ್ಲಿ ಇದು ಸಹಕಾರಿ ಎಂದರು. ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಬಿ. ಶಂಕರರಾವ್ ಅವರನ್ನು ಸನ್ಮಾಸಿದರಲ್ಲದೆ, ವಾಗೀಶ್ವರಿಶಾಸ್ತ್ರಿ ಸಂಗೀತ ಪ್ರತಿಭಾ ಪುರಸ್ಕಾರವನ್ನು ಚೈತ್ರಿಕಾ ಅವರಿಗೆ ನೀಡಿ ಗೌರವಿಸಿದರು. ಸಂಘದ ವ್ಯವಸ್ಥಾಪಕ ಸುರೇಶ್‌ಬಾಬು, ಕಾರ್ಯದರ್ಶಿ ಬಿ.ಕೆ. ಶ್ರೀನಿವಾಸಮೂರ್ತಿ ಇದ್ದರು. ವಿದ್ವಾನ್ ಆರ್.ಕೆ. ಪದ್ಮನಾಭ ಹಾಗೂ ವಿದುಷಿ ಸತ್ಯವತಿ ನೀಲಕಂಠ ಅವರು ಪಂಚರತ್ನ ಕೀರ್ತಿನೆಗಳ ಗಾಯನ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

