ಮೈಸೂರು

ಬಿಜೆಪಿಗೆ ಯೋಗೇಶ್ವರ್ ದ್ರೋಹ

Published On :

ಶ್ರೀರಂಗಪಟ್ಟಣ: ಅಧಿಕಾರದ ಸುಖ ಅನುಭವಿಸಿ ಕಾಂಗ್ರೆಸ್‌ಗೆ ಜಿಗಿದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪದೇ ಪದೇ ಚಂಚಲ ನಿರ್ಧಾರ ಕೈಗೊಳ್ಳುವ ಅವರೊಬ್ಬರು ಸಭ್ಯ ರಾಜಕಾರಣಿ ಅಲ್ಲ ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಭಾನುವಾರ ಪ್ರತಿಕ್ರಿಯೆಸಿದರು.
ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮುನ್ನ ಮಾರ್ಗ ಮಧ್ಯೆ ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಆರ್. ಅಶೋಕ, ಮಾಜಿ ಸಚಿವ ಯೋಗೇಶ್ವರ್ ಕೈಗೊಂಡಿರುವ ನಿರ್ಧಾರ ಮಾತ್ರ ಅತ್ಯಂತ ದ್ರೋಹದಿಂದ ಕೂಡಿದೆ. ಈ ನಿರ್ಧಾರ ನನಗೆ ತುಂಬಾ ನೋವಾಗಿದೆ ಎಂದರು.  ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿರುವ ಮೈಸೂರಿನ ಶಾಸಕ ಶಂಕರಲಿಂಗೇಗೌಡರು ಪಕ್ಷದಲ್ಲೇ ಉಳಿಯುವ ವಿಶ್ವಾಸ ನನಗಿದೆ. ನಾನು ಅವರೊಂದಿಗೆ ಮಾತುಕತೆ ಮಾಡಿದ್ದೇನೆ. ಅದು ಫಲಪ್ರದವಾಗಿದೆ. ಹೀಗಾಗಿ ಪಕ್ಷದಿಂದ ತೊರೆಯುತ್ತಾರೆಂದು ಖಚಿತವಾಗಿ ಹೇಳಲಾರೆ ಎಂದರು.
ಈ ವೇಳೆ ಬಿಜೆಪಿ ಮುಖಂಡರುಗಳೊಂದಿಗೆ ಸ್ಥಳೀಯ ಪುರಸಭೆ ಮತ್ತು ಮುಂಬರುವ ವಿಧಾನಸಭೆ ಚುನಾವಣೆಯ ರೂಪುರೇಷೆಗಳ ಕುರಿತು ಉಪ ಮುಖ್ಯಮಂತ್ರಿ ಅಶೋಕ ಕೆಲ ಹೊತ್ತಿನ ಕಾಲ ಮಾತಕತೆ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರು ಮೂಡಾ ಅಧ್ಯಕ್ಷ ನಾಗೇಂದ್ರ, ವಸ್ತು ಪ್ರದರ್ಶನ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೆ.ಬಲರಾಂ, ಎಂ. ಸಂತೋಷ್, ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಉಮಾಶಂಕರ್, ಪುರಸಭೆ ಮಾಜಿ ಸದಸ್ಯ ಪ್ರಕಾಶ್, ಕೃಷ್ಣರಾಜೇಂದ್ರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಉಮೇಶ್, ಕಾರ್ತಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.