ಮೈಸೂರು

ಹಿರಿಯ ನಾಗರಿಕರಿಗೆ ಗುರುತಿನ ಕಾರ್ಡ್

Published On :

ಮೈಸೂರು: ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘದಿಂದ 60 ವರ್ಷ ತುಂಬಿದ ವಕೀಲರು ಹಾಗೂ ಪೋಷಕರಿಗೆ ಹಿರಿಯ ನಾಗರಿಕರ ಗುರುತಿನ ಕಾರ್ಡ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆ.25 ಮತ್ತು 25ರ ಬೆಳಗ್ಗೆ 10 ರಿಂದ ಸಂಜೆ 5.30 ರೊಳಗೆ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ 50 ಶುಲ್ಕ ಪಾವತಿಸಿ, ಅರ್ಜಿ ಪಡೆಯಬಹುದು. ಈ ಕಾರ್ಯಕ್ರಮವನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಬಸವರಾಜು ಉದ್ಘಾಟಿಸಲಿದ್ದು, ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ ಅತಿಥಿಯಾಗಿ ಭಾಗವಹಿಸುವರು ಎಂದು ಡಾ. ನರಸಿಂಹಸ್ವಾಮಿ ತಿಳಿಸಿದ್ದಾರೆ. ಮೊ. 91416 14633, 99804 98389 ಸಂಪರ್ಕಿಸಬಹುದು.
ಇಂದು ಎಲ್ಲಮ್ಮಾಂಬ ಜಾತ್ರಾ ಮಹೋತ್ಸವ
ಮೈಸೂರು: ನಗರದ ಮಂಡಿ ಮೊಹಲ್ಲಾದ ಎಲ್ಲಮ್ಮಾಂಬ, ಚಂದ್ರಗುಪ್ತಾಂಬ ದೇವಿಯ 66ನೇ ಜಾತ್ರಾ ಮಹೋತ್ಸವವು ಫೆ. 25ರಂದು ನಡೆಯಲಿದೆ. ಜಾತ್ರೆಯ ಅಂಗವಾಗಿ ಫೆ. 25ರ ಸಂಜೆ 5ಕ್ಕೆ ದೇವಿಯ ರಥೋತ್ಸವ ನಡೆಯಲಿದೆ. ಮಿಷನ್ ಆಸ್ಪತ್ರೆಯ ಎಲ್ಲಮ್ಮಾಂಬ ವೃತ್ತದಲ್ಲಿ ರಥೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಅಂದು ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯುತ್ತದೆ. ಫೆ. 24ರ ಸಂಜೆ 6ಕ್ಕೆ ಸಿರಿದೇವಿ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಲ್ಲಮ್ಮಾಂಬ ಚಂದ್ರಗುಪ್ತಾಂಬ ಧರ್ಮಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ. ರುದ್ರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.