ಮೈಸೂರು

ಚಾಮರಾಜನಗರ ಜಿಲ್ಲಾ ಗೆಳೆಯರ ಬಳಗ ಅಸ್ತಿತ್ವಕ್ಕೆ

Published On :

ಮೈಸೂರು: ಅತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಇತರೆ ಜಿಲ್ಲೆಗಳ ವೇದಿಕೆಗಳಂತೆ ಚಾಮರಾಜನಗರ ಜಿಲ್ಲಾ ಗೆಳೆಯರ ಬಳಗವನ್ನು ಅಸ್ತಿತ್ವಕ್ಕೆ ತರಲಾಗಿದೆ.
ಇತ್ತೀಚೆಗೆ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಚಾಮರಾಜನಗರ ಜಿಲ್ಲೆಗೆ ಶಾಪಗ್ರಸ್ತ ಜಿಲ್ಲೆ ಎಂಬ ಪೂರ್ವಗ್ರಹಪೀಡಿತ ಮಾತುಗಳಿಗೆ ವಿರೋಧ ವ್ಯಕ್ತಪಡಿಸಲಾಯಿತು. ಈ ಜಿಲ್ಲೆಯಲ್ಲಿ ಮಲೈ ಮಹದಶ್ವರಸ್ವಾಮಿ, ಹೊಗೇನಕಲ್ ಜಲಪಾತವಿದೆ. ಇಲ್ಲಿನ ಉದ್ಯಮಿಗಳು ವ್ಯಾಪಾರ ವಹಿವಾಟು ನಡೆಸಿ ವೃತ್ತಿಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟಿದ್ದರೂ ಈ ಜಿಲ್ಲೆ ಹೇಗೆ ತಾನೆ ಶಾಪಗ್ರಸ್ತ ಜಿಲ್ಲೆಯಾಗುತ್ತದೆ ಎಂದು ವೇದಿಕೆಯಲ್ಲಿದ್ದವರು ಪ್ರಶ್ನಿಸಿದರು.
ಇದೇ ವೇಳೆ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಸುಶ್ರುತ ಕಣ್ಣಿನ ಆಸ್ಪತ್ರೆಯ ಡಾ. ಪ್ರಭು ಅವರನ್ನು ಸನ್ಮಾನಿಸಲಾಯಿತು.
ಗೀತಾ ಭವನ್‌ನ ಸೊ.ಲ. ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಅಧ್ಯಕ್ಷ ಸಿ.ವಿ. ಶ್ರೀನಿವಾಸಶೆಟ್ಟಿ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ, ಶ್ರೇಯಸ್ ಕ್ಲಿನಿಕ್‌ನ ಡಾ. ನಾಗಾರ್ಜುನ, ಜಿ.ಎಸ್. ನಂಜುಂಡಸ್ವಾಮಿ, ಗೋಪಾಲಕೃಷ್ಣ, ಫಾ. ಜೋಸೆಫ್, ಚೌಡೇಗೌಡ, ಪುಟ್ಟರಾಜು, ರಾಜೇಂದ್ರಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.