ಇಂದಿನಿಂದ ನೂತನ ಬಸ್ ಸಂಚಾರ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಾ.1 ರಿಂದ ಮೈಸೂರಿನಿಂದ 12 ನೂತನ ಬಸ್‌ಗಳ ಸಂಚಾರ ಆರಂಭಿಸಲಿದೆ ಎಂದು ಗ್ರಾಮಾಂತರ ವಿಭಾಗಾಧಿಕಾರಿ ಟಿ.ಆರ್. ನವೀನ್ ತಿಳಿಸಿದ್ದಾರೆ. ಕೊಯಮತ್ತೂರು, ವೇಗದೂತ- ಬೆಳಗ್ಗೆ 11.30, ರಾಜಹಂಸ- ಸಂಜೆ 4.30, ವೇಗದೂತ- ರಾತ್ರಿ 10.45 ಮತ್ತು ರಾತ್ರಿ 8.30. ಊಟಿ, ವೇಗದೂತ- ಬೆಳಗ್ಗೆ 9.30, ಸಂಜೆ 5.30 ವೈಭವ್- ಬೆಳಗ್ಗೆ 6.30. ತಿರುಪ್ಪೂರು, ವೇಗದೂತ- ಬೆಳಗ್ಗೆ 7.15, ಸಂಜೆ 5.01, ಚೆನ್ನೈ, ವೋಲ್ವೋ- ರಾತ್ರಿ 8.01, ಮಧುರೈ, ವೈಭವ್- ರಾತ್ರಿ 10.5, ವೇಗದೂತ- ಸಂಜೆ 7.30
ಬಸ್ ಪಾಸ್ ಮಾನ್ಯತೆ: ಅಂಗವಿಕಲರ ಬಸ್ ಪಾಸ್‌ಅನ್ನು ಮಾ. 31 ರವರೆಗೆ ನವೀಕರಣವಿಲ್ಲದೆ ಮಾನ್ಯ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ
ರಾಜ್ಯ ಮಟ್ಟದ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಯು ಮಾ. 4 ರಿಂದ 13 ರವರೆಗೆ ನಡೆಯಲಿದೆ. 4 ರಂದು ಪ್ರಥಮ ಭಾಷೆ, 5 ರಂದು ವಿಜ್ಞಾನ, 8 ರಂದು ತೃತೀಯ ಭಾಷೆ, 9 ರಂದು ಸಮಾಜ ವಿಜ್ಞಾನ, 12 ರಂದು ದ್ವಿತೀಯ ಭಾಷೆ ಹಾಗೂ 13 ರಂದು ಗಣಿತ ಪರೀಕ್ಷೆ ನಡೆಯಲಿದೆ.
ಟಿಪ್ಪರ್ ಹರಿವು ವ್ಯಕ್ತಿ ಸಾವು
ಟಿ. ನರಸೀಪುರ: ಟಿಪ್ಪರ್ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಜರುಗಿದೆ. ತಾಲೂಕಿನ ಹಿರಿಯೂರು ಗ್ರಾಮದ ಬಸವಣ್ಣ (32) ಮೃತಪಟ್ಟ ದುರ್ದೈವಿ. ಬೆಳಗ್ಗೆ ಬಹಿರ್ದೆಸೆ ಮುಗಿಸಿಕೊಂಡು ತಲಕಾಡು ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿದೆ. ಎಸ್‌ಐ ಕೆ.ಆರ್. ಗೋಪಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ, ಟಿಪ್ಪರ್ ಚಾಲಕನ್ನು ಬಂಧಿಸಿದ್ದಾರೆ.
ಭಿಕ್ಷುಕಿ ಶವ ಪತ್ತೆ: ಕೊಲೆ ಶಂಕೆ
ಮೈಸೂರು: ರಕ್ತಸಿಕ್ತ ಸ್ಥಿತಿಯಲ್ಲಿ ಭಿಕ್ಷುಕಿ ಶವ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದ್ದು, ಯಾರೋ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಾರ್ವತಮ್ಮ (65) ಮೃತಪಟ್ಟವರು. ಇವರು ಭಿಕ್ಷೆ ಬೇಡಿಕೊಂಡಿದ್ದು, ಎನ್.ಆರ್. ಮೊಹಲ್ಲಾದ ರಬ್ಬಾನಿ ಮಸೀದಿ ಬಳಿಯ ಇವರ ಶವ ಪತ್ತೆಯಾಗಿದ್ದು, ಎನ್.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಮೈಸೂರು: ಕುಡಿತ ಚಟ ಬಿಡಲು ಆಗದೇ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.ಬನ್ನಿಮಂಟಪ ಎಲ್‌ಐಸಿ ಕಟ್ಟಡದ ಬಳಿಯ ನಿವಾಸಿ ರಮೇಶ್ ಅ. ರುಕ್ಮಾಂಗದ (50) ಆತ್ಮಹತ್ಯೆ ಮಾಡಿಕೊಂಡವರು. ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓಶೋ ಧ್ಯಾನ ಶಿಬಿರ
ಬೆಂಗಳೂರು: ಮೂರು ದಿನಗಳ ಓಶೋ ಧ್ಯಾನ ಶಿಬಿರ ಮೈಸೂರಿನಲ್ಲಿ ಮಾ.14ರಿಂದ ಮೂರು ದಿನಗಳ ವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ: ಮನೀಶಾ-9480278144, ಜೈ-9164385551.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

