ಮುಕ್ತ ವಿವಿ: ಅಧ್ಯಯನ ಸಾಮಗ್ರಿ ರವಾನೆ
ಮೈಸೂರು: ರಾಜ್ಯ ಮುಕ್ತ ವಿವಿಯಿಂದ ವಿವಿಧ ಶಿಕ್ಷಣ ಕ್ರಮಗಳಿಗೆ 2012-13ನೇ ಸಾಲಿನಲ್ಲಿ ಅಂಚೆ ಮೂಲಕ ಪ್ರವೇಶಾತಿ ಪಡೆದಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ ರವಾನಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಅಧ್ಯಯನ ಸಾಮಗ್ರಿ ಉಪ ಕುಲಸಚಿವ ಡಾ.ಎಂ.ಎಚ್. ಕೃಷ್ಣಪ್ಪ ಹೇಳಿದ್ದಾರೆ.
ಇವುಗಳಲ್ಲಿ ಕೆಲವು ವಿದ್ಯಾರ್ಥಿಗಳ ಅಧ್ಯಯನ ಸಾಮಗ್ರಿಗಳು ವಿಳಾಸ ಸರಿಯಿಲ್ಲದ ಕಾರಣ ಅಥವಾ ವಿಳಾಸ ನೀಡಿದ್ದ ಸ್ಥಳದಲ್ಲಿ ಅಂಚೆ ಸ್ವೀಕರಿಸಲು ವಿದ್ಯಾರ್ಥಿಗಳು ಇಲ್ಲದ ಕಾರಣದಿಂದ ವಿವಿ ನಿಲಯದ ಕೇಂದ್ರ ಸ್ಥಾನಕ್ಕೆ ಹಿಂದಿರುಗಿ ಬಂದಿರುತ್ತದೆ. ಈ ವಿದ್ಯಾರ್ಥಿಗಳ ವಿವರಗಳನ್ನು ಮುಕ್ತ ವಿವಿ ವೆಬ್ಸೈಟ್ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿನಲ್ಲಿ ಪ್ರಕಟಿಸಲಾಗಿದೆ.
ಈ ವಿದ್ಯಾರ್ಥಿಗಳು ಕೇಂದ್ರ ಸ್ಥಾನಕ್ಕೆ ಖುದ್ದಾಗಿ ಬಂದು ತಮ್ಮ ಅಧ್ಯಯನ ಸಾಮಗ್ರಿ ಪಡೆಯಬಹುದು ಅಥವಾ ಅಂಚೆ ಮೂಲಕವೇ ಪಡೆಯಲು ಇಚ್ಛಿಸುವವರು ಅಂಚೆ ವೆಚ್ಚ 100ರ ಡಿಡಿಯನ್ನು ಹಣಕಾಸು ಅಧಿಕಾರಿಗಳು, ಕರಾಮುವಿ, ಮೈಸೂರು- 06 ಇವರ ಹೆಸರಿನಲ್ಲಿ ಪಡೆದು, ವಿದ್ಯಾರ್ಥಿಯ ಹೆಸರು, ನೋಂದಣಿ ಸಂಖ್ಯೆ, ಸರಿಯಾದ ನೂತನ ವಿಳಾಸದೊಂದಿಗೆ (ದೂರವಾಣಿ ಸಂಖ್ಯೆಯೊಂದಿಗೆ) ಕವರಿಂಗ್ ಲೆಟರ್ ಸಹಿತ ಉಪ ಕುಲಸಚಿವರು, ಅಧ್ಯಯನ ಸಾಮಗ್ರಿ ವಿಭಾಗ, ಮುಕ್ತ ವಿವಿ, ಮಾನಸಗಂಗೋತ್ರಿ, ಮೈಸೂರು- 06 ಗೆ ಕಳುಹಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಯನ್ನು ಅಂಚೆ ಮೂಲಕ ರವಾನಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಪ ಕುಲಸಚಿವ, ಅಧ್ಯಯನ ಸಾಮಗ್ರಿ ವಿಭಾಗ, ಡಾ.ಎಂ.ಎಚ್. ಕೃಷ್ಣಪ್ಪ, ಮೊ. 9481068660, ಕಚೇರಿ ಸಿಬ್ಬಂದಿ ಸುರೇಶ್, ಮೊ. 9448600275, ಸಿ.ಕೆ. ಪುಟ್ಟಸ್ವಾಮಿ, ಮೊ. 9880561997 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

