ಮೈಸೂರು

ಚಿಂತಕ ಆಶಿಷ್ ನಂದಿ ಗಡಿಪಾರಿಗೆ ಒತ್ತಾಯ

Published On :

ಮೈಸೂರು: ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನ ಭ್ರಷ್ಟರು ಎಂದಿರುವ ಚಿಂತಕ ಆಶಿಷ್ ನಂದಿ ಹೇಳಿಕೆಯನ್ನು ಮೈಸೂರು ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಖಂಡಿಸಿದೆ. ಸಾಮಾಜಿಕ ಚಿಂತಕ ನಂದಿಯವರು ಕನಿಷ್ಠ ಸಾಮಾಜಿಕ ಜವಾಬ್ದಾರಿಯಿಲ್ಲದೆ ಹಾಗೂ ಇಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದೆ ಈ ಪರಿ ಭಾಷಣ ಮಾಡಿ ಮೇಲ್ವರ್ಗ ಮತ್ತು ಹಿಂದುಳಿದ ವರ್ಗಗಳ ನಡುವೆ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ಈ ಗೋಮುಖ ವ್ಯಾಘ್ರನನ್ನು ವಿಳಂಬ ಮಾಡದೆ ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ವೇದಿಕೆಯ ಸಭೆಯಲ್ಲಿ ಒತ್ತಾಯಿಸಲಾಯಿತು. ದೇಶಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಆಶಿಷ್ ನಂದಿಯನ್ನು ಗಡಿಪಾರು ಮಾಡುವಂತೆ ಸಭೆ ಆಗ್ರಹಿಸಿತು. ಅಧ್ಯಕ್ಷ ವಿ.ಮಂಜುನಾಥ, ಉಪಾಧ್ಯಕ್ಷ ಎಂ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಸಂಘಟನಾ ಕಾರ್ಯದರ್ಶಿಗಳಾದ ಡೈರಿ ವೆಂಕಟೇಶ್ ಇದ್ದರು.

ಎಸ್ಸಿ ಘಟಕ ಖಂಡನೆ
ಮೈಸೂರು ನಗರ ಕಾಂಗ್ರೆಸ್ ಎಸ್ಸಿ ಘಟಕವು ಆಶಿಷ್ ನಂದಿ ಹೇಳಿಕೆ ಖಂಡಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ನಾಯಕರು ಉನ್ನತ ಹುದ್ದೆಯಲ್ಲಿದ್ದರು. ಅವರ ಆಳ್ವಿಕೆಯಲ್ಲಿ ದೇಶ ಉದ್ಧಾರವಾಗಿಲ್ಲವೇ. ಒಂದು ಜಾತಿ, ವರ್ಗದ ಹೆಸರು ಹೇಳಿಕೊಂಡು ಅವರನ್ನು ಹೀಯಾಳಿಸುವುದು ಚಿಂತಕರ ಲಕ್ಷಣವಲ್ಲ. ಕೂಡಲೇ ನಂದಿಯನ್ನು ಗಡಿಪಾರು ಮಾಡಬೇಕು ಎಂದು ಘಟಕದ ಅಧ್ಯಕ್ಷ ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಡಿ.ಈಶ್ವರ್ ಚಕ್ಕಡಿ, ರಾಜಶೇಖರ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.