ನಾಳೆ ಓದು ವಿಮರ್ಶೆ
ಮೈಸೂರು: ಚಿಂತನ ಚಿತ್ತಾರವು ಸಾಹಿತಿ ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ಪುಸ್ತಕದ ಓದು ವಿಮರ್ಶೆ ಕಾರ್ಯಕ್ರಮವನ್ನು ಜ.30ರ ಸಂಜೆ 5ಕ್ಕೆ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಆಯೋಜಿಸಿದೆ. ವಿಮರ್ಶಕ ಪ್ರೊ.ಶಿವರಾಮು ಕಾಡನಕುಪ್ಪೆ ಮಾತನಾಡುವರು. ಡಾ.ಪ್ರೀತಿ ಶುಭಚಂದ್ರ ಪ್ರತಿಕ್ರಿಯಿಸುವರು. ಪತ್ರಕರ್ತ ಕೆ. ಕಿರಣ್‌ಕುಮಾರ್, ಉಪನ್ಯಾಸಕ ಎಂ. ಕ್ರಾಂತಿರಾಜ್ ಅತಿಥಿಗಳಾಗಿ ಆಗಮಿಸುವರು. ನಿಂಗರಾಜ ಚಿತ್ತಣ್ಣನವರ್ ಕಾರ್ಯಕ್ರಮ ನಿರ್ವಹಿಸುವರು.
ಸಾಮೂಹಿಕ ಪೂಜೆ ನಾಳೆ
ಆಲನಹಳ್ಳಿಯ ಶ್ರೀ ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಜ.30ರ ಸಂಜೆ 6ಕ್ಕೆ ಇಲ್ಲಿನ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಘ್ನೇಶ್ವರ ಸ್ವಾಮಿಗೆ ವಿಶೇಷ ಸಾಮೂಹಿಕ ಪೂಜೆ ಏರ್ಪಡಿಸಿದೆ ಎಂದು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಬಿ.ವಿ. ಶ್ರೀನಿವಾಸಗುಪ್ತ ತಿಳಿಸಿದ್ದಾರೆ.
ಸಾಂಸ್ಕೃತಿಕ ಸಂಘದ ಸಮಾರೋಪ
ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜ.30ರ ಬೆಳಗ್ಗೆ 10.30ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಒಂದು ನೆನಪು ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಾರ್ಯಕ್ರಮ ಉದ್ಘಾಟಿಸುವರು, ಉಪನ್ಯಾಸಕ ಮಹೇಶ್ ಹರವೆ ಪ್ರಧಾನ ಭಾಷಣ ಮಾಡುವರು. ಡಿಡಿಪಿಯು ಕೆ.ಎಂ. ಪುಟ್ಟು, ಮಾಜಿ ಮೇಯರ್ ಪುರುಷೋತ್ತಮ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

