ನಾಳೆ ಜಿಲ್ಲಾಮಟ್ಟದ ಯುವಜನ ಮೇಳ
ಮೈಸೂರು: ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಜ.30 ರಂದು ಹುಣಸೂರು ತಾಲೂಕಿನ ಗಾವಡಗೆರೆಯಲ್ಲಿ 2012-13ನೇ ಸಾಲಿನ ಮೈಸೂರು ಜಿಲ್ಲಾಮಟ್ಟದ ಯುವಜನ ಮೇಳ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಭಾವಗೀತೆ, ಗೀಗೀ ಪದಗಳು, ಲಾವಣಿ, ಕೋಲಾಟ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಸೋಬಾನೆ ಪದ, ಭಜನೆ, ಯಕ್ಷಗಾನ, ಚರ್ಮವಾದ್ಯ, ಮೇಳ, ಏಕಪಾತ್ರಾಭಿನಯ, ವೀರಗಾಸೆ, ಪುರವಂತಿಕೆ, ವೀರಭದ್ರನ ಕುಣಿತ, ಜೋಳ- ರಾಗಿ ಬೀಸುವ ಪದ, ಜನಪದ ಗೀತೆ, ದೊಡ್ಡಾಟ ಮತ್ತು ಸಣ್ಣಾಟ ಸ್ಪರ್ಧೆಗಳನ್ನು ನಡೆಸಲಾಗುವುದು. 15 ರಿಂದ 35 ವರ್ಷದೊಳಗಿನ ಯುವಕ- ಯುವತಿಯರು ಸ್ಪರ್ಧಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಮೇಳದಲ್ಲಿ ಭಾಗವಹಿಸಬಹುದು. ಆಸಕ್ತರು ಅಂದು ಬೆಳಗ್ಗೆ 9ಕ್ಕೆ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್ ತಿಳಿಸಿದ್ದಾರೆ. ದೂ. 0821- 2564179 ಸಂಪರ್ಕಿಸಬಹುದು.
ದರ್ಶನ ಸಂಪುಟಕ್ಕೆ ರಿಯಾಯಿತಿ
ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಕಟಿಸಿರುವ ಮೈಸೂರು ದರ್ಶನದ 3ನೇ ಮತ್ತು 4ನೇ ಸಂಪುಟಗಳನ್ನು ಹೊಸ ವರ್ಷದ ಅಂಗವಾಗಿ ಫೆ.8 ರವರೆಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 3ನೇ ಸಂಪುಟದ ಮುಖಬೆಲೆ 900 ಮತ್ತು 4ನೇ ಸಂಪುಟದ ಮುಖಬೆಲೆ 1100 ಇದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ರಿಯಾಯಿತಿ ದರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮುಕ್ತ ವಿವಿ ಕುಲಸಚಿವರು ಕೋರಿದ್ದಾರೆ.
ವಿವಿಧ ಪಕ್ಷಗಳಿಗೆ ನೇಮಕ
ನಗರ ಕಾಂಗ್ರೆಸ್ ಸಮಿತಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಆರ್. ದಿನೇಶ್ ಕೊಪ್ಪಲ್, ಮಹಿಳಾ ಕಾಂಗ್ರೆಸ್ ಸಮಿತಿಯ ದೇವರಾಜ ಅರಸು ಬ್ಲಾಕ್ ಅಧ್ಯಕ್ಷರಾಗಿ ಡಿ. ರಾಜಲಕ್ಷ್ಮೀ ಸಾವಂತ್, ಕೃಷ್ಣರಾಜ ವಿಧಾನಸಭಾ ಪ. ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಬಿ. ಶಶಿಕಾಂತ, ಕಾರ್ಮಿಕ ವಿಭಾಗದ ವಾರ್ಡ್ ನಂ. 12ರ ಅಧ್ಯಕ್ಷರಾಗಿ ರಾಮಯ್ಯ, ಉಪಾಧ್ಯಕ್ಷರಾಗಿ ಡಿ. ನಾರಾಯಣ ಮೂರ್ತಿ, ಜೆಡಿಎಸ್ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ಕೌಶಲ್ಯಪ್ರಸಾದ್, ಅಖಿಲ ಕರ್ನಾಟಕ ಬಡವರ ಬಂಧು ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ ಅಧ್ಯಕ್ಷೆಯಾಗಿ ಶಾಂತಾ, ಕಾರ್ಯಾಧ್ಯಕ್ಷೆಯಾಗಿ ಪಿ.ಎ. ಶಕು ಅಪ್ಪಯ್ಯ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಕೆ.ಆರ್. ಕ್ಷೇತ್ರದ ಕಾರ್ಯದರ್ಶಿಯನ್ನಾಗಿ ಮಂಜುಳ, ಪ್ರೇಮಾ ಅವರನ್ನು ನೇಮಕ ಮಾಡಲಾಗಿದೆ.
ಅರ್ಜಿ ಆಹ್ವಾನ
ಚಾಮರಾಜನಗರ: ಮರಿಯಾಲ ಜೆಎಸ್ಎಸ್ ರುಡ್ಸೆಟ್ ಸಂಸ್ಥೆ, ಹೈದರಾಬಾದ್ ಎನ್ಐಎಂಎಸ್ಎಂಇ ಇವರ ಸಹಯೋಗದಲ್ಲಿ ಎಸಿ ರೆಫ್ರಿಜರೇಟರ್ ವಾಟರ್ ಕೂಲರ್ ದುರಸ್ತಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಳ್ಳೇಗಾಲದ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ಎಸ್.ಎಸ್.ಕಂಪ್ಯೂಟೆಕ್ ಸೆಂಟರ್ನಲ್ಲಿ ತರಬೇತಿ ನೀಡಲಾಗುತ್ತದೆ. ಮೈಸೂರು, ಚಾಮರಾಜನಗರ,ಯಳಂದೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಹಾಗೂ ಸುತ್ತಮುತ್ತಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 50 ದಿನ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯುವವರು ಕೊಳ್ಳೇಗಾಲದ ಎಸ್.ಎಸ್.ಕಂಪ್ಯೂಟೆಕ್ ಸೆಂಟರ್ನಲ್ಲಿ ಅರ್ಜಿ ಪಡೆದು ಅಂಕಪಟ್ಟಿ ಜೊತೆ 3 ಭಾವಚಿತ್ರ, ಪಡಿತರ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ, ಜ.31ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 08226-230140, 99016228639 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

