ಮೈಸೂರು

ಪ್ರಜೆಯಾಗಿ ದೇಶವನ್ನು ಸದೃಢಗೊಳಿಸಲು ಕರೆ

Published On :

ಮೈಸೂರು: ಗಣರಾಜ್ಯೋತ್ಸವ ಆಚರಿಸುವುದು ಮುಖ್ಯವಲ್ಲ, ನಾವು ದೇಶದ ಪ್ರಜೆಯಾಗಿ ನಮಗೆ ಅನೇಕ ಜವಾಬ್ದಾರಿ ಇದೆ ಎನ್ನುವುದು ಮುಖ್ಯ ಎಂದು ಭಾರತೀಯ ನಂ.2 ವಾಯುದಳ ಆಯ್ಕೆ ವಿಭಾಗದ ಮುಖ್ಯಸ್ಥ ಸ್ನೇಹಾ ಸಿಂಗ್ ಹೇಳಿದರು. ಸರಸ್ವತಿಪುರಂನ ಜೆಎಸ್‌ಎಸ್ ಸಮುಚ್ಚಯದಲ್ಲಿ ನಡೆದ 64ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಎನ್‌ಸಿಸಿ ಕೆಡೆಟ್ ಹಾಗೂ ಶಾಲಾ ಮಕ್ಕಳಿಂದ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಸಂಪತ್ತು, ನೀವು ಉತ್ತಮ ಪ್ರಜೆಗಳಾಗಿ, ಪ್ರಾಮಾಣಿಕ ಅಧಿಕಾರಿಯಾಗಿ, ಉತ್ತಮ ರಾಜಕಾರಣಿಯಾಗಿ ದೇಶ ಸೇವೆ ಮಾಡಿ, ದೇಶವನ್ನು ಸದೃಢ, ಬಲಿಷ್ಠ ಹಾಗೂ ಮುಂದುವರಿದ ರಾಷ್ಟ್ರವನ್ನಾಗಿ ಮಾಡಬೇಕೆಂದು ಅವರು ಕರೆ ನೀಡಿದರು. ಜೆಎಸ್‌ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆಂಪನಂಜಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮುಚ್ಚಯದ ಎಲ್ಲಾ ಮುಖ್ಯಸ್ಥರು, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.