ಮೈಸೂರು

ಫೆ.2 ರಂದು ನಗರಕ್ಕೆ ಅಮ್ಮ

Published On :

ಮೈಸೂರು: ಇಲ್ಲಿನ ಬೋಗಾದಿ ಬಡಾವಣೆಯ ಎರಡನೆ ಹಂತದಲ್ಲಿರುವ ಬ್ರಹ್ಮಸ್ಥಾನಂ ದೇವಸ್ಥಾನದ ವಾರ್ಷಿಕ ಮಹೋತ್ಸವವು ಫೆ.2 ಮತ್ತು 3 ರಂದು ನೆರವೇರಲಿದೆ. ಮಾತಾ ಅಮೃತಾನಂದಮಯಿ ಅವರು ನಗರಕ್ಕೆ ಆಗಮಿಸಲಿದ್ದು, ಫೆ.2 ಮತ್ತು 3ರ ಬೆಳಗ್ಗೆ 10ಕ್ಕೆ ಅಮ್ಮನವರ ದರ್ಶನ ಪಡೆದು ಆಶೀರ್ವಾದ ಪಡೆಯಲು ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ದರ್ಶನದ ಪೂರ್ವಭಾವಿಯಾಗಿ ಪ್ರವಚನ, ಧ್ಯಾನ, ಮತ್ತು ಭಜನೆ ನಡೆಯಲಿದ್ದು, ಎಲ್ಲಾ ಭಕ್ತಾದಿಗಳಿಗೂ ವೈಯಕ್ತಿಕವಾಗಿ ದರ್ಶನ ನೀಡುತ್ತಾರೆ. ವಾರ್ಷಿಕ ಮಹೋತ್ಸವದ ಅಂಗವಾಗಿ ನಿರಂತರವಾಗಿ ಲಲಿತ ಸಹಸ್ರನಾಮರ್ಚನೆ, ಉದಯಾಸ್ಥಮಾನ ಪೂಜೆ, ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ ಹಾಗೂ ಮಹಾಸುದರ್ಶನ ಹೋಮಗಳ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರು ತಮ್ಮ ಹೆಸರನ್ನು ಮಠದ ಕಾರ್ಯಾಲಯದಲ್ಲಿ ಅಥವಾ ದೂರವಾಣಿ ಮೂಲಕ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗೆ ದೂ. 2543243, ಮೊ. 9980350373 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.