ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜು. 4
ಶಾಸಕ ಕೆ. ವೆಂಕಟೇಶ್ ಅವರು 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಿಂದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.
ಇಲ್ಲಿನ ಮಸಣೀಕಮ್ಮ ದೇವಾಲಯದ ಮುಂಭಾಗ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ. ವೆಂಕಟೇಶ್ ಅವರ ಪುತ್ರ ನಿತಿನ್, ತಮ್ಮ ತಂದೆಯ ಗೆಲವಿಗಾಗಿ ಪಕ್ಷದ ಕೆಲವು ಯುವ ಮುಖಂಡರು ಪಾದಯಾತ್ರೆ ಮಾಡುವುದಾಗಿ ಹರಸಿಕೊಂಡಿದ್ದರು. ಅದರಂತೆಯೆ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಕೆ. ವೆಂಕಟೇಶ್ ಅವರು ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಹಿನ್ನೆಲೆ ಈ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪಪಂ ಸದಸ್ಯರಾದ ಸಣ್ಣಪ್ಪ, ತ್ರಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ಚಂದ್ರು, ಪ್ರಧಾನ ಕಾರ್ಯದರ್ಶಿ ನಿಲಂಗಾಲ ಜಯಣ್ಣ, ಖಜಾಂಚಿ ಬಿ.ಜೆ. ಬಸವರಾಜು, ಮುಖಂಡರಾದ ವಿನಯಶೇಖರ್, ಗಿರೀಶ್, ಮಂಜು, ಪಿ. ಮಹದೇವ್, ಸುರೇಶ್, ಹರೀಶ್, ಎಸ್. ರಾಮು, ವೈ. ವೆಂಕಟಯ್ಯ, ವಿಷಕಂಠಯ್ಯ, ಕೆ.ಜೆ. ವೆಂಕಟೇಶ್ ಇದ್ದರು.
ಅಕ್ಕಿಗಿರಣಿ ಮಾಲೀಕರ ಸಂಘಕ್ಕೆ ಆಯ್ಕೆ
ಪಿರಿಯಾಪಟ್ಟಣ: ತಾಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಇಲ್ಲಿನ ನಾಗಕೃಪ ಅಕ್ಕಿಗಿರಣಿ ಮಾಲೀಕ ಪಿ.ಕೆ. ನಾಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಅಕ್ಕಿಗಿರಣಿ ಮಾಲೀಕರ ಸಭೆಯಲ್ಲಿ ಅಧ್ಯರನ್ನಾಗಿ ಪಿ.ಕೆ. ನಾಗಪ್ಪ ಹಾಗೂ ಕಾರ್ಯದರ್ಶಿಯನ್ನಾಗಿ ಕಂಪಲಾಪುರದ ಗಣೇಶ ಅಕ್ಕಿ ಗಿರಣಿ ಮಾಲೀಕ ಪ್ರಕಾಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಲೆವಿಗೆ ವಿರೋಧ: ತಾಲೂಕಿನಲ್ಲಿ ಸತತವಾಗಿ ಕಳೆದ ವರ್ಷದಿಂದ ಬರಗಾಲ ಪರಿಸ್ಥಿತಿ ಉದ್ಬವಿಸಿದ್ದು, ಕಳೆದ ವರ್ಷವೂ ಸಮರ್ಪಕವಾಗಿ ಮಳೆಯಾಗಿಲ್ಲ ಹಾಗೂ ಕೆರೆಕಟ್ಟೆಗಳು ನೀರಿಲ್ಲದೆ ಒಣಗಿದ್ದು, ಇಂತಹ ಸಂದರ್ಭದಲ್ಲಿ ಲೆವಿ ವಿಧಿಸಲು ಸರ್ಕಾರ ಕೈಗೊಂಡಿರುವ ತೀರ್ಮಾನ ದುರದೃಷ್ಟಕರ. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಾಲೂಕಿನ ಮಟ್ಟಿಗೆ ಲೆವಿ ರದ್ದು ಪಡಿಸುವಂತೆ ಸಭೆಯಲ್ಲಿ ಸರ್ವಾನುಮತದಿಂದ ಆಗ್ರಹಿಸಿತು. ಅಕ್ಕಿಗಿರಣಿ ಮಾಲೀಕರಾದ ದೊಡ್ಡಬೇಲಾಳು ಬಲರಾಂ, ಕಿತ್ತೂರು ನಾಗರಾಜ್, ಮರದೂರು ಧಶರಥ, ಬೆಟ್ಟದಪುರ ವೆಂಕಟೇಶ್ ಹಾಗೂ ವೃಷಬೇಂದ್ರಪ್ಪ, ಕೊಪ್ಪ ಸಿ.ಎಸ್. ರೇಣುಕ, ಶಾನುಭೋಗನಹಳ್ಳಿ ಮಹದೇವಪ್ಪ, ಪಿರಿಯಾಪಟ್ಟಣದ ಪಿ.ವಿ. ನಂಜುಂಡಸ್ವಾಮಿ, ಪಿ.ಎಸ್. ಮೋಹನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

