ಮೈಸೂರು

ಮಕ್ಕಳಿಗೆ ಕನ್ನಡ ಪರಂಪರೆ ತಿಳಿಸಿ: ಡಾ. ಕಬ್ಬಿನಾಲೆ

Published On :

ಕ.ಪ್ರ.ವಾರ್ತೆ , ಎಚ್.ಡಿ.ಕೋಟೆ , ಜು. 7
ಕಲೆ, ಸಾಹಿತ್ಯ, ಕಾವ್ಯಗಳು ಎಲ್ಲಾ ಕಾಲದಲ್ಲೂ ಶಾಶ್ವತವಾಗಿರುತ್ತವೆ. ಆದರೆ, ಅವುಗಳ ಸ್ವಾದವನ್ನು ನಮ್ಮ ಮಕ್ಕಳಿಗೆ ಉಣಬಡಿಸಲು ಸಾಧ್ಯವಾಗುತ್ತಿಲ್ಲ. ಕನ್ನಡ ಬೇರನ್ನು ಮತ್ತಷ್ಟು ಸದೃಢವಾಗಿಡಲು ನಮ್ಮ ಮಕ್ಕಳಿಗೆ ಕನ್ನಡ ಪರಂಪರೆ ತಿಳಿಸಬೇಕಿದೆ ಎಂದು ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಾವ್ಯವು ಕನ್ನಡದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ತಾಲೂಕಿನ ಗಣ್ಯರಾದ ಡಾ. ಮೃತ್ಯುಂಜಯಪ್ಪ, ಡಾ. ಚಲುವೇಗೌಡ, ವಿಲಿಯಂ ಡಿಸೋಜ, ಕೆ.ಸಿ. ಸಿದ್ದಪ್ಪ, ಮಹೇಶ್, ಜಿ.ಎಂ. ರಕ್ಷಿತ್, ಮೈಮುನ್ನೀಸಾ ಬೇಗಂ, ಎಸ್.ಆರ್. ನಾಗಾರಾಮ್, ನಂದಕುಮಾರ್, ವೆಂಕಟಪ್ಪ, ಲೀಲಾವತಿ ರಾಮಕೃಷ್ಣ, ಸಿದ್ದಪ್ಪ, ಚಿಕ್ಕನಾಯಕ, ಹನುಮಂತನಾಯಕ, ಸುಬ್ರಮಣ್ಯ, ರಂಗ ಶೆಟ್ಟಿ, ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಎಸ್. ಚಿಕ್ಕಮಾದು, ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ತಾಲೂಕು ಅಧ್ಯಕ್ಷ ಮಹೇಶ್, ಡಾ.ವೈ.ಡಿ. ರಾಜಣ್ಣ, ಕನ್ನಡ ಪ್ರಮೋದನ್, ಕೆ.ಎಸ್. ಶಿವರಾಮು, ಮಡ್ಡೀಕೆರೆ ಗೋಪಾಲ್, ಮಾಜಿ ಪ್ರಧಾನರಾದ ಎಂ.ಸಿ. ದೊಡ್ಡನಾಯಕ, ಸೋಮೇಶ್, ವೆಂಕಟಸ್ವಾಮಿ, ಮಂಜುಕೋಟೆ, ದಯಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.