ಮೈಸೂರು

ಮಹಿಳೆಯರು ಗುಡಿ ಕೈಗಾರಿಕೆ ಕಡೆ ಗಮನ ನೀಡಲಿ

Published On :

ಹುಣಸೂರು: ಮಹಿಳೆಯರು ಆರ್ಥಿಕವಾಗಿ ಸದೃಢಗೊಳಿಸಲು ಸಂಘದ ಸಾಲ ಸೌಲಭ್ಯವನ್ನು ಹೈನುಗಾರಿಕೆ ಮತ್ತು ಗುಡಿ ಕೈಗಾರಿಕೆ ಸೇರಿದಂತೆ ಇನ್ನಿತರ ಆದಾಯ ಬರುವ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಯೋಜನೆಯ ಮೇಲ್ವಿಚಾರಕ ರಾಘವೇಂದ್ರ ಹೇಳಿದರು.
ತಾಲೂಕಿನ ಹನಗೋಡು ಹೋಬಳಿಯ ಕಾಡಂಚಿನ ಗ್ರಾಮದ ಕಾಳಬೋಚನಹಳ್ಳಿ ಗ್ರಾಮದಲ್ಲಿ ನೂತನವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಬಸವೇಶ್ವರ ಹಾಗೂ ನರಸಿಂಹಸ್ವಾಮಿ ಸ್ವಸಹಾಯ ತಂಡವನ್ನು ರಚಿಸಿದ ಬಳಿಕ ಮಾತನಾಡಿದ ಅವರು, ಶೌಚಾಲಯ ನಿರ್ಮಾಣ, ಕೈತೋಟ ನಿರ್ಮಾಣ, ಸಾವಯವ ಕೃಷಿಗೆ ಉತ್ತೇಜನ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳು ಈ ಯೋಜನೆಯಲ್ಲಿ ಒಳಗೊಂಡಿದ್ದು, ಇದರ ಸದುಪಯೋಗವನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು. ನೇರಳಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಭಾಕರ ಹೆಗ್ಗಡೆ, ಸಂಘ ಉದ್ಘಾಟಿಸಿ ಮಾತನಾಡಿದರು. ಪ್ರತಿನಿಧಿಗಳಾದ ಶಶಿರೇಖಾ, ಮಹದೇವಿ, ಸುಲೋಚನ, ಮಹದೇವಮ್ಮ, ಗೌರಮ್ಮ, ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ
ಹುಣಸೂರು: ಆಕಸ್ಮಿಕವಾಗಿ ಗುಡಿಸಲು ಮನೆಗೆ ಬೆಂಕಿ ಬಿದ್ದು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಭಸ್ಮವಾಗಿದೆ.
ತಾಲೂಕಿನ ಸಂಜೀವಿನಿನಗರ ಗ್ರಾಮದ ಸುಶೀಲಮ್ಮ ರಾಮಚಂದ್ರಯ್ಯ ಅವರಿಗೆ ಸೇರಿದ್ದ ಗುಡಿಸಲು ಮನೆಗೆ ಸೋಮವಾರ ಬಿದ್ದ ಆಕಸ್ಮಿಕ ಬೆಂಕಿಯಿಂದ ಮನೆಯೊಳಗಿದ್ದ ದವಸ-ಧಾನ್ಯಗಳು, ಬಟ್ಟೆಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳು ಸುಟ್ಟು ಹೋಗಿದೆ.  ಆಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಜನಪ್ರತಿನಿಧಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಬಡ ಕುಟುಂಬದ ಕಡೆ ಗಮನಹರಿಸಿ, ಸೂಕ್ತ ಪರಿಹಾರ ನೀಡುವಂತೆ ಗ್ರಾಪಂ ಮಾಜಿ ಉಪಾಧ್ಯಕ್ಷ ಅಸ್ವಾಳು ಶಂಕರೇಗೌಡ ಆಗ್ರಹಿಸಿದ್ದಾರೆ.
ಮೃತನ ಕುಟುಂಬಕ್ಕೆ ನೆರವು
ಹುಣಸೂರು: ತಾಲೂಕು ದ್ವಿಚಕ್ರ ವಾಹನಗಳ ದುರಸ್ತಿಗಾರರ ಸಂಘದ ಸದಸ್ಯ ರಾಜ ಎಂಬವರು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ, ಸಂಘದ ವತಿಯಿಂದ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು.
ಇಲ್ಲಿನ ಕಲ್ಕುಣಿಕೆಯ ಅತ್ತಿಮರದ ಬೀದಿಯ ನಿವಾಸಿ ಸಣ್ಣನಾಯಕರ ಮಗ ರಾಜ, ಬೈಪಾಸ್ ರಸ್ತೆಯಲ್ಲಿರುವ ಹೋಂಡಾ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಸಂಘದ ಅಧ್ಯಕ್ಷ ಅತಾವುಲ್ಲಾ, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಮಹಮದ್ ಸಾಖಿವುಲ್ಲ, ಖಜಾಂಚಿ ಬಷೀರ್ ಅಹಮದ್, ಸಂಘಟನಾ ಕಾರ್ಯದರ್ಶಿ ಗುಲ್ಮುನ್ನಾ, ಅತೀಕ್ ಅಹಮದ್, ಮುನಾವರ್ ಪಾಷಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.