ಮೈಸೂರು

'ಆಮ್ ಆದ್ಮಿ ನಾಯಕತ್ವ ಅಣ್ಣಾ ವಹಿಸಿದ್ದರೆ ಮತ್ತಷ್ಟು ಬಲ'

Published On :

ಕ.ಪ್ರ.ವಾರ್ತೆ  ಮೈಸೂರು  ಜು. 14
ಆಮ್ ಆದ್ಮಿ ನಾಯಕತ್ವವನ್ನು ಅಣ್ಣಾ ಹಜಾರೆ ವಹಿಸಿಕೊಂಡಿದ್ದರೆ ಮತ್ತಷ್ಟು ಬಲ ಬರುತ್ತಿತ್ತು ಎಂದು ಚಿಂತಕ ಪ್ರೊ. ಪಿ.ವಿ. ನಂಜರಾಜ ಅರಸ್ ಹೇಳಿದರು.
ನಗರದ ಜಿ.ಕೆ. ಮೈದಾನದ ಮೈಸೂರು ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.
ಆಮ್ ಆದ್ಮಿಯ ನಾಯಕತ್ವವನ್ನು ಹಜಾರೆ ವಹಿಸಿಕೊಂಡಿದ್ದರೆ, ಈಗಿರುವ ಬಲದ ಜೊತೆಗೆ ಮತ್ತಷ್ಟು ಹೆಚ್ಚಿನ ಬಲ ಬರುತ್ತಿತ್ತು. ಆದರೂ ಈಗ ಅವರ ಪ್ರೇರಣೆಯಿಂದಲೆ ಹುಟ್ಟಿರುವ ಈ ಸಂಘಟನೆ ದೊಡ್ಡ ಆಸೆ ಇಟ್ಟುಕೊಂಡಿದೆ. ಆದರೆ, ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಹರಿಕಾರ ಎನ್ನುವ ದೇವರಾಜ ಅರಸ್ ಸಹ ಟೀಕೆಗೆ ಗುರಿಯಾಗಬೇಕಾಯಿತು. ಆದ್ದರಿಂದ ನಾವು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಬೇಕು. ಮಾಜಿ ಸಚಿವ ಎಸ್.ಎ. ರಾಮದಾಸ್ ನನಗೆ ಆತ್ಮೀಯರು. ಆದರೆ, ಆತ ಭ್ರಷ್ಟಾಚಾರದ ಸಂಸ್ಥಾಪಕ. ಮೈಸೂರಿನ ವರ್ತುಲ ರಸ್ತೆಯ ಸುತ್ತಲೂ ಸಾವಿರಾರು ಎಕರೆ ಜಮೀನು ಅವರಿಗಿದೆ. ಆದ್ದರಿಂದ ಅವರು ಸೋಲಬೇಕು ಎಂಬ ಆಸೆ ಇತ್ತು ಎಂದು ಅರಸ್ ತಿಳಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ವಿದ್ಯಾರಣ್ಯ ಮಾತನಾಡಿ, ಉತ್ತಮ ಸರ್ಕಾರ ಎಂದರೆ ಸರ್ವರಿಗೂ ಸಮಪಾಲು ನೀಡುವುದೆ ಹೊರತು ಪೈಸೆ ಲೆಕ್ಕದಲ್ಲಿ ಅಕ್ಕಿ ಕೊಡುವುದಲ್ಲ. ಪಾರದರ್ಶಕ, ಉತ್ತರದಾಯಿತ್ವ ಆಡಳಿತ ಬೇಕು. ಈ ನಿಟ್ಟಿನಲ್ಲಿ ಆಮ್ ಆದ್ಮಿ ಕೆಲಸ ಮಾಡಬಹುದು ಎಂಬ ನಿರೀಕ್ಷಿಸುತ್ತೇನೆ ಎಂದರು.
ಪಕ್ಷದ ರಾಜ್ಯ ಖಜಾಂಚಿ ಚಂದ್ರಕಾಂತ್, ಜಿಲ್ಲಾ ಸಂಚಾಲಕ ವಿನೋದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.