ಮೈಸೂರು

ಗ್ರೀನ್ಬಡ್ಸ್ ಎಂಡಿ ಬಿಡುಗಡೆಗೆ ಮನವಿ

Published On :

ಕ.ಪ್ರ. ವಾರ್ತೆ   ಮೈಸೂರು   ಜು.17
ಗ್ರೀನ್ಬಡ್ಸ್ ಆಗ್ರೋ ಫಾರಂ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್ ಅವರನ್ನು ಬಿಡುಗಡೆಗೊಳಿಸಿ ಗ್ರಾಹಕರಿಗೆ ಹಣ ಹಿಂದಿರುಗಿಸಲು ಅವಕಾಶ ಮಾಡಿಕೊಡಬೇಕು ಎಂದು ಗ್ರೀನ್ಬಡ್ಸ್ ಸಂಸ್ಥೆಯ ಕ್ಷೇತ್ರ ಕಾರ್ಯಕರ್ತರು (ಏಜೆಂಟರು) ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಗ್ರೀನ್ಬಡ್ಸ್ ಸಂಸ್ಥೆಯೂ ಮೈಸೂರಿನಲ್ಲಿ ಕೇಂದ್ರ ಕಚೇರಿ, ರಾಜ್ಯದ 72 ಶಾಖಾ ಕಚೇರಿಗಳನ್ನು ಹೊಂದಿದೆ. ಸಂಸ್ಥೆಯ ಎಂಡಿ ರವೀಂದ್ರನಾಥ್ ಅವರು 2012ರ ಡಿಸೆಂಬರ್ ಅಂತ್ಯವರೆಗೂ ಗ್ರಾಹಕರಿಗೆ ಕಟ್ಟಿದ ಹಣ ಹಿಂದಿರುಗಿಸಿಕೊಂಡು ಬಂದಿದ್ದಾರೆ. ಕಳೆದ 6 ತಿಂಗಳಿಂದ ಮೆಚ್ಯೂರಿಟಿ ಹಣ ಕೊರತೆ ಆಡಳಿತ ಮಂಡಳಿಯ ಲೋಪದೋಷಗಳಿಂದ ಕಂಡು ಬಂದಿದೆ. ಇದರಿಂದ ಗ್ರಾಹಕರು ಮತ್ತು ಏಜೆಂಟರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ನಡುವೆ ಪೊಲೀಸರು ರವೀಂದ್ರನಾಥ್ ಅವರನ್ನು ಬಂಧಿಸಿರುವುದು ಗ್ರಾಹಕರು ಮತ್ತು ಏಜೆಂಟರು ಆತ್ಮಹತ್ಯೆ ಮುಂತಾದ ಅನಾಹುತ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಸಂಸ್ಥೆಯು ಕೋಟ್ಯಂತರ ರು. ಆಸ್ತಿ ಹೊಂದಿದ್ದು, ಇದನ್ನು ಮಾರಾಟ ಮಾಡಿ ಗ್ರಾಹಕರಿಗೆ ಹಿಂತಿರುಗಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಪೊಲೀಸರು ರವೀಂದ್ರನಾಥ್ ಅವರನ್ನು ಗ್ರಾಹಕರು ಮತ್ತು ಏಜೆಂಟರಿಗೆ ಒಪ್ಪಿಸಬೇಕು. ರವೀಂದ್ರನಾಥ್ ಬಂಧನದಿಂದಾಗಿ ಏಜೆಂಟರು ಗ್ರಾಮ ತೊರೆದಿದ್ದಾರೆ. ಹೀಗಾಗಿ ರವೀಂದ್ರನಾಥ್ನನ್ನು ನಮಗೆ ಒಪ್ಪಿಸಿದರೆ ಹಣ ವಸೂಲಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಯಾವುದೇ ಅನಾಹುತ ಸಂಭವಿಸಿದರು ಪೊಲೀಸರು ಮತ್ತು ಸರ್ಕಾರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಈ ವಿಚಾರದ ಸೂಕ್ಷ್ಮತೆ ಗಮನಿಸಿ ಗ್ರಾಹಕರಿಗೆ ಮತ್ತು ಏಜೆಂಟರಿಗೆ ಸಂಸ್ಥೆಯೇ ಹಣ ಹಿಂತಿರುಗಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಉದ್ಯಾನವನದಲ್ಲಿ ನೂರಾರು ಮಂದಿ ಏಜೆಂಟರು ಮತ್ತು ಗ್ರಾಹಕರು ಸಭೆ ನಡೆಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.